ಪುರಾಣ ಪ್ರವಚನಗಳು ಮನುಷ್ಯನ ಬದುಕು ಹಸನಾಗಿಸುವ ಪ್ರಮುಖ ಮಾರ್ಗ : ಬಿಬ್ಬಳ್ಳಿ

ಸೇಡಂ, ಏ.16:: ಇಂದಿನ ಆಧುನಿಕ ಭರಾಟೆಯಲ್ಲಿ ಸಂಸ್ಕಾರಕ ಜಂಜಾಟದಲ್ಲಿ ನೆಮ್ಮದಿ ಇಲ್ಲದೆ ಒದ್ದಾಡುತ್ತಿರುವ ಜನರಲ್ಲಿನ ತಾಮಸ ಗುಣಗಳನ್ನು ತೊಡೆದು ಹಾಕಿ ಅವರನ್ನು ಸನ್ನಡೆಯುತ್ತ ಕರೆದೊಯ್ಯುವಲ್ಲಿ ಶರಣರ ಹಾಗೂ ಸಿದ್ದಿ ಪುರುಷರ ಜೀವನ ಚರಿತ್ರೆ ತಿಳಿಸುವ ಪುರಾಣ ಪ್ರವಚನಗಳು ಮನುಷ್ಯನ ಬದುಕು ಹಸನಗೊಳಿಸುವ ಪ್ರಮುಖ ಮಾರ್ಗವಾಗಿವೆ ಎಂದು ವೀರಶೈವ ಶೈಕ್ಷಣಿಕ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಹೇಳಿದರು.ತಾಲೂಕಿನ ಜಾಕನಹಳ್ಳಿಯ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಮಹಾದಾಸೋಹಿ ಶರಣಬಸವೇಶ್ವರ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಜನರಿಗೆ ಸನ್ಮಾರ್ಗ ತೋರಿಸುವ ಮೂಲಕ ಅವರ ಬದುಕನ್ನು ಹಸನು ಮಾಡುವಲ್ಲಿ ಈ ನಾಡಿನಲ್ಲಿ ಅನೇಕ ಶರಣರು ಸಂತರು ತಮ್ಮ ಸಾಧನೆಗಳ ಮೂಲಕ ಕೊಡುಗೆ ನೀಡಿದ್ದು ಕಲ್ಬುರ್ಗಿಯ ಶರಣಬಸವೇಶ್ವರರು ಮಹಾನ್ ಪವಾಡ ಪುರುಷರಾಗಿದ್ದು ಬೇಡಿದ್ದನ್ನು ದಯಪಾಲಿಸುವ ಕರ್ಣಮಯಿ ಆಗಿದ್ದರು ಅವರ ಜೀವನ ಚರಿತ್ರೆ ಕೇಳುವುದರಿಂದ ಮಾನವ ಜೀವನ ಪಾವನವಾಗುತ್ತದೆ ಎಂದು ಹೇಳಿದರು,ಪವಾಡಗಳ ಮೂಲಕ ನಮ್ಮ ನೆಲವನ್ನು ಪಾವನಗೊಳಿಸಿದ ಜಾಕನಹಳ್ಳಿ ಮಠದ ಶ್ರೀ ಶಿವಯೋಗೀಶ್ವರರ ಕೊಡುಗೆ ಅಪಾರವಾಗಿದೆ
ಎಂದರು.ದೇವರ ಹಿಪ್ಪರಗಿ ಮಠದ ಷ.ಬ್ರ. ಶ್ರೀ ಜಡೆಸಿದ್ದೇಶ್ವರ ಶಿವಾಚಾರ್ಯರುದಿವ್ಯಸಾನಿಧ್ಯವಹಿಸಿ ಮಾತನಾಡಿ ಪ್ರವಚನಗಳ ಆಲಿಕೆಯ ಮೂಲಕ ಮನಸ್ಸು ಪರಿಶುದ್ಧಗೊಳ್ಳುತ್ತದೆ,ಶರಣರ ಸಂತರ ಸಮಾವೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು,ಕಲ್ಬುರ್ಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಕುರಿತು ಷ.ಬ್ರ. ಶ್ರೀ ಶಿವಬಸವ ಶಿವಾಚಾರ್ಯರು ಪ್ರವಚನ ನಡೆಸಿಕೊಟ್ಟರು, ಜಾಕನಹಳ್ಳಿ ಮಠದ ಶ್ರೀಗಳಾದ ಷ.ಬ್ರ.ಶ್ರೀ ಅಭಿನವ ಗವಿಸಿದ್ದಲಿಂಗೇಶ್ವರ ಶಿವಾಚಾರ್ಯರು ನೇತೃತ್ವವಹಿಸಿದರು. ನಾರಾಯಣರೆಡ್ಡಿ ಪಾಟೀಲ ಅವರು ಪ್ರಾಸ್ತಾವಿಕ ಮಾತನಾಡಿದರು.ಸಿದ್ದಯ್ಯ ಸ್ವಾಮಿ ಜಾಕನಪಲ್ಲಿ,ಪರ್ವತರೆಡ್ಡಿ ಮಾಲಿಪಾಟೀಲ, ಚಂದ್ರಶೇಖರರೆಡ್ಡಿ ಆಡಕಿ, ನೀಲಕಂಠ ಮುತ್ತಗಿ,ಮೋಹನರೆಡ್ಡಿ, ತಿಮ್ಮಾರೆಡ್ಡಿ ಮಾಲಿಪಾಟೀಲ, ಸಾಬಣ್ಣ ಸಂಜಗಿ, ಭೀಮಶಪ್ಪ, ಸಿದ್ದಪ್ಪ, ಕೆ
ಸೇರಿದಂತೆ ಇತರರಿದ್ದರು.