ಪುರಾಣ ಪುಣ್ಯ ಕಥೆಗಳಿಂದ ನೆಮ್ಮದಿ


ಶಿರಹಟ್ಟಿ,ಮಾ.14: ಭಾರತ ದೇಶದಲ್ಲಿ ಪುರಾಣ ಪುಣ್ಯ ಕಥೆಗಳ ಕಾರ್ಯ ಜರಗುತ್ತಿರುವುದರಿಂದ ದೇಶದಲ್ಲಿ ಶಾಂತಿ ನೆಮ್ಮದಿಯ ಬದುಕು ಹೊಂದಲು ಕಾರಣವಾಗಿದೆ. ಪ್ರಸ್ತುತ ದಿನದಲ್ಲಿ ಧರ್ಮದ ಮಹತ್ವವನ್ನು ಅರಿಯಲು ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅವಶ್ಯವಿದೆ ಎಂದು ಯುವ ಮುಖಂಡ ಮಹೇಶ ಲಮಾಣಿ ಹೇಳಿದರು.
ಅವರು ಪಟ್ಟಣದ ಬಡಿಗೇರ ಓಣಿಯಲ್ಲಿ ಏರ್ಪಡಿಸಲಾಗಿದ್ದ 49ನೇ ವರ್ಷದ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಪ್ರಾರಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನಾಡಿದರು.
ಧರ್ಮವನ್ನು ಅರಿತಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ದಾನ ಧರ್ಮ ದಂತಹ ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಪಾಪ ವನ್ನು ಕಳೆದುಕೊಳ್ಳಬಹುದಾಗಿದೆ. ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರವಚನವನ್ನು ಇಲಕಲ್‍ನ ಆರ್. ಶರಣಬಸವ ಶಾಸ್ತ್ರೀ, ಸಂಗೀತ ಹನುಮಂತಕುಮಾರ ಶಿರಹಟ್ಟಿ, ತಬಲಾದ ಸಾಥ ವಿರೇಶ ಹಿರೇಮಠ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಪಂಚಾಯತ ಅಧ್ಯಕ್ಷಣಿ ಗಂಗಮ್ಮ ಆಲೂರ, ಕೆ.ಎ.ಬಳಿಗೇರ, ಬಸವರಾಜ ಹೊಸೂರ, ಬಸವರಾಜ ಅಡರಕಟ್ಟಿ,ಬವರಾಜ ಭೋರಶೆಟ್ಟರ, ರವಿ ಹಳ್ಳಿ, ಮೃತ್ಯುಂಜಯ ಬಡಿಗೇರ,