ಪುರಾಣ ಪುಣ್ಯಕಥೆಗಳಿಂದ ಮಾನವ ಜನ್ಮ ಸಾರ್ಥಕ ಅಭಿನವ ಶ್ರೀ

ರಾಯಚೂರು, ಏ.೧೮- ಮಾನ್ವಿ ತಾಲೂಕಿನ ಅತ್ತನೂರು ಗ್ರಾಮದ ಸೋಮವಾರಪೇಟೆ ಹಿರೇಮಠದಲ್ಲಿ ಗ್ರಾಮ ದೇವತೆ ದಿಡ್ಡಿ ಬಸವೇಶ್ವರ ಕೃಪಾಶೀರ್ವಾದ, ಷ.ಬ್ರ.ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಷ.ಬ್ರ.ಶ್ರೀಲಿಂ. ರಾಚೋಟಿ ಶಿವಾಚಾರ್ಯಮಹಾಸ್ವಾಮಿಗಳು ಇವರ ದಿವ್ಯ ಕೃಪಾಶೀರ್ವಾದದಿಂದ ಹಾಗೂ ಅಬಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಇವರ ಅಧ್ಯಕ್ಷತೆಯಲ್ಲಿ ಮತ್ತು ನೀಲಗಲ್ ಬೃಹನ್ಮಠದ ಷ.ಬ್ರ.ಶ್ರೀ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ವೇ.ಮೂ. ರಾಚಯ್ಯಪ್ಪ ತಾತಾ ಜಾಗಟಗಲ್, ವೇ.ಮೂ. ಬೆಟ್ಟಪ್ಪ ತಾತಾ ಜಾಗಟಗಲ್ ಇವರ ದಿವ್ಯ ಸಾನಿಧ್ಯದಲ್ಲಿ ಷ.ಬ್ರ.ಶ್ರೀ ಲಿಂ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳವರ ೧೭ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಶರಣಬಸವೇಶ್ವರರ ಪುರಾಣ ಮಂಗಲೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ವೇಧಿಕೆಯ ಮೇಲೆ ವಿರಾಜಮಾನರಾದ ಸರ್ವ ಶ್ರೀಗಳು ಹಾಗೂ ಗಣ್ಯರು ಹಿರಿಯ ಮಹಿಳೆಯರು ಶರಣ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ವೇಧಿಕೆಯ ಮೇಲೆ ಖ್ಯಾತ ಪ್ರವಚನಕಾರರಾದ ವೇ.ಮೂ. ಮಲ್ಲಿಕಾರ್ಜುನ ಶಾಸ್ತ್ರಿಗಳು ಯಾದಗಿರಿ ಇವರು ಪುರಾಣ ಪ್ರವಚನದ ಮುಕ್ತಾಯದ ಪೀಠಿಕೆಯನ್ನು ಪ್ರಚನದ ಮೂಲಕ ಪ್ರಸ್ತುತ ಪಡಿಸಿ ಪುರಾಣವನ್ನು ಮಹಾಮಂಗಲಗೊಳಿಸಿದರು. ನಂತರ ಗವಾಯಿಗಳಾದ ವೇ.ಮೂ. ಮನೋಹರ ಪಿ. ಹಿರೇಮಠ ತಲೆಕಟ್ಟು, ಅಂಕಲಲಮಠ ಇವರು ಪುರಾಣ ಪ್ರಚನವನ್ನು ಮುಂದಿನ ವರ್ಷದ ಪುರಾಣ ಪ್ರವಚನದ ಆರಂಭಕ್ಕಾಗಿ ಸಂಪ್ರದಾಯದಂತೆ ಪ್ರಾರಂಭದ ಪೀಠಿಕೆಯನ್ನು ಸಂಗೀತದ ಮೂಲಕ ಪಠಿಸುತ್ತ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಕೊಟ್ಟರು. ಇವರಿಗೆ ಮೌನೇಶಕುಮಾರ ಹಾಲ್ವಿ ತಬಲಾ ಸಾಥ್ ನೀಡಿದರು ನಂತರ ಶ್ರೀಮಠದ ಅರ್ಚಕರು ಪುರಾಣದ ವತ್ತಿಗೆಗೆ ಪೂಜೆ ಸಲ್ಲಿಸಿ ಮಂಗಳಾರುತಿ ಮಾಡಿ ಅದನ್ನು ಪ್ರವಚನಕಾರರ ಮೂಲಕ ಶ್ರೀಗಳಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಠದ ಅಭಿನವ ಶ್ರೀಗಳು ಕಳೆದ ಸುಮಾರು ವರ್ಷಗಳಿಂದ ಅತ್ತನೂರಿನ ಶ್ರೀಮಠದಲ್ಲಿ ಹಿರಿಯ ಶ್ರೀಗಳ ಪುಣ್ಯಸ್ಮರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಕೊಂಡು ಬಂದಿದ್ದು ಕಂಡು ನಮ್ಮ ಮನಸ್ಸಿಗೆ ತುಂಬ ಸಂತೋಷವಾಗಿತ್ತು ಆದರೆ ಈ ವರ್ಷ ಕೊರೋನಾ ಮಹಾಮಾರಿಯ ಮದ್ಯದಲ್ಲಿ ಜನಗಳು ಕೆಲಸವಿಲ್ಲದೆ ತುಂಬ ಕಸ್ಟಕರವಾದ ಜೀವನದ ಮಧ್ಯ ಅದೇಗೆ ಪುಣ್ಯಸ್ಮರಣೆಯ ಬಗ್ಗೆ ಗ್ರಾಮಸ್ತರಲ್ಲಿ ಪ್ರಸ್ತಾಪ ಮಾಡುವುದು ಎಂಬ ಯೋಚನೆಯಲ್ಲಿ ಇದ್ದಾಗ ಕೆಲವು ಗ್ರಾಮದ ಗುರು ಹಿರಿಯರು ಸರ್ವವನ್ನು ದಿಡ್ಡಿ ಬಸವೇಶ್ವರ ಮತ್ತು ರಾಚೋಟಿ ಶಿವಾಚಾರ್ಯರ ಮೇಲೆ ಭಾರ ಹಾಕಿ ಪುಣ್ಯಸ್ಮರಣೆಯನ್ನು ಮಾಡೋಣ ಬುದ್ದಿ ನೀವೇನು ಯೋಚನೆ ಮಾಡುವುದು ಬೇಡ ಎಂಬ ಧೈರ್ಯದ ನುಡಿಗಳನ್ನು ಕೇಳಿ ಆ ಭಗವಂತನ ಮೇಲೆ ಭಾರವಾಕಿ ಪುರಾಣ ಪ್ರವಚನವನ್ನು ಪ್ರಾರಂಭಿಸಲಾಯಿತು ಆದರೆ ವರ್ಷಕ್ಕಿಂತಲೂ ಈ ವರ್ಷ ಅತೀ ವಿಜೃಂಭಣೆಯಿಂದ ಆಚರಿಸಲಾಗಿದೆ. ನಮಗಂತೂ ಮನಸ್ಸಿಗೆ ತುಂಬ ಸಂತೋಷವಾಗಿದೆ ಎಂದು ಹೇಳಿದರು. ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಶ್ರೀಮಠಕ್ಕೆ ತನು, ಮನ, ಧನಾದಿಗಳ ತ್ರೀಕರಣ ಸೇವೆ ಸಲ್ಲಿಸಿದ್ದನ್ನು ಕಂಡು ನಮಗೆ ತುಂಬ ಸಂತೋಷವಾಗಿದೆ ಕೊಟ್ಟದ್ದು ತನಗೆಬಚ್ಚಿಟ್ಟಿದ್ದು ಪರರಿಗೆ
ಕೊಟ್ಟು ತಾ ಕೆಟ್ಟೆನೆನಬೇಡ ಮುಂದೆ ನಿನಗೆ ಕಟ್ಟಿಟ್ಟ ಬುತ್ತಿ. ಎಂಬ ನಾಡುನುಡಿಯ ಪ್ರಕಾರ ಸರ್ವರೂ ಸಹಿತ ತುಂಬು ಮನಸ್ಸಿನಿಂದ ಸೇವೆ ಸಲ್ಲಿಸಿದ್ದಾರೆ ಸರ್ವರಿಗೂ ಆ ಭಗವಂತ ಆಯುರಾರೋಗ್ಯ ಐಶ್ವರ್ಯ ಸುಖ ನೆಮ್ಮಧಿಯನ್ನು ಕೊಟ್ಟು ಕಾಪಾಡಲು ಜಗದ್ಗುರು ಪಂಚಾಚಾರ್ಯ, ದಿಡ್ಡಿ ಬಸವೇಶ್ವರರ ಹಾಗೂ ಲಿಂ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾ ಸದಾ ನಿಮಗೆ ಇರಲಿ ಎಂದು ತಮ್ಮ ಶುಭಾಶೀರ್ವಚನದ ಧರ್ಮಸಂದೇಶದಲ್ಲಿ ತಿಳಿಸಿದರು.
ನಂತರ ಮಾತನಾಡಿದ ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ್ ಅತ್ತನೂರು ರಾಜ್ಯ ಉಪಾಧ್ಯಕ್ಷರು,
ಜಾತ್ಯಾತೀತ ಜನತಾದಳ, ಬೆಂಗಳೂರು.
ಸದಸ್ಯರು,ಜಿಲ್ಲಾ ಪಂಚಾಯತ್, ಕಲ್ಲೂರು, ಅತ್ತನೂರು.ಶ್ರೀಮತಿ ಜ್ಯೋತಿ ನಾಗನಗೌಡ
ಸದಸ್ಯರು,ತಾಲೂಕು ಪಂಚಾಯತ್.
ಸಿದ್ದಯ್ಯ ಸ್ವಾಮಿ ಚೇಗುಂಟ
ಅಧ್ಯಕ್ಷರು,ರಾಯಚೂರು ತಾಲೂಕಾ ಕನ್ನಡ ಜಾನಪದ ಪರಿಷತ್,ದಾನಮ್ಮ, ಸುಭಾಷಚಂದ್ರ ಕಡಗಂಚಿ ಅಧ್ಯಕ್ಷರು,ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ರಾಯಚೂರು, ಸದಸ್ಯರಾದ ಶ್ರೀಮತಿ ಅಕ್ಕಮಹಾದೇವಿ, ಶ್ರೀಮತಿ ಸಕ್ರಿ,
ಬಸವರಾಜ ಹಳೇಮನಿ,ಬೂದೆಪ್ಪ ಸ್ವಾಮಿ,ವಿರುಪಾಕ್ಷಯ್ಯ ಸ್ವಾಮಿ ಅತ್ತನೂರು,
ಬಸನಗೌಡ ಅತ್ತನೂರು,ಪ್ರಾರಂಭದಲ್ಲಿ ವೇಧಘೋಷವನ್ನು ಚನ್ನಬಸವಶಾಸ್ತ್ರಿ ಮಾಡಿದರೆ ಸಭಾ ನಿರೂಪಣೆಯನ್ನು ವೇ.ಮೂ. ವೀರಭದ್ರಯ್ಯ ಸ್ವಾಮಿ ಅತ್ತನೂರು ಇವರು ನಡೆಸಿಕೊಟ್ಟರು.
ಸರ್ವರಿಗೂ ಪ್ರಸಾದ ವಿತರಣೆ ಮಾಡಲಾಯಿತು.ನೂರಾರು ಗ್ರಾಮಸ್ಥರು ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.