ಪುರಾಣದಲ್ಲಿದೆ ಭಕ್ತಿಯ ಮಾರ್ಗ:ತಾವರಗೇರಾ ಶ್ರೀಗಳು

ಕಲಬುರಗಿ:ಆ.18:ಶ್ರವಣ ಎಂದರೆ ಕೇಳುವುದು ವರ್ಷದ 12ತಿಂಗಳು ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿರುವಂತದ್ದು ಮನಸ್ಸು, ಭಾವ, ಅಂತರಂಗದ ಮಲೀನತೆ ಕಳೆಯುವ ತಿಂಗಳು ಶರಣರ, ಸಂತರ, ಸತ್ಪೂರುಷರ, ಪವಾಡ ಪುರುಷರ ವಚನಾಮೃತದಿಂದ ಮನಸ್ಸು ಸ್ಚಚ್ಚವಾಗುತ್ತದೆ. ಪುರಾಣ ಪ್ರವಚನಗಳಲ್ಲಿ ಅನೇಕ ನೀತಿ ಕಥೆಗಳು ಧರ್ಮದ ಆಚರಣೆಗಳು ಗುರುಹಿರಿಯರಿಯರಲ್ಲಿ ಕರುಣೆ ಕಾಣುವಂತಹ ಭಕ್ತಿಯ ಮಾರ್ಗಗಳು ಕಾಣುತ್ತೇವೆ ಎಂದು ಸುಕ್ಷೇತ್ರ ತಾವರಗೇರಾ ಮಠದ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ಧಾರೂಢ ಮಹಾಸ್ವಾಮಿಗಳು ದಿನಾಂಕ 17.08.2023ರಂದು ಸಾಯಂಕಾಲ 7:30ಗಂಟೆಗೆ ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶ್ವರಾಧ್ಯರ ಪುರಾಣ-ಪ್ರವಚನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಯಾದಗಿರಿ ಜಿಲ್ಲೆಯ ಒಂದು ಸಣ್ಣ ಗ್ರಾಮ ಅಬ್ಬೆತುಮಕೂರ ಇದು ವಿಶ್ವರಾಧ್ಯರ ದೇವಾಲಯಕ್ಕೆ ಸುಪ್ರಸಿದ್ಧ ವಿಶ್ವರಾಧ್ಯರು ಬನ್ನಯ ಶಾಸ್ತ್ರಿ ಮತ್ತು ನೀಲಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ರಾಚೋಟ ಎಂಬ ಗುರುವಿನಲ್ಲಿ ವಿದ್ಯೆ ಕಲಿತು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಬಾಲಕನಾಗಿದ್ದಾಗಲೆ ವಿಶ್ವರಾಧ್ಯರು ಅನೇಕ ನೀತಿ, ಪವಾಡಗಳನ್ನು ತೋರಿಸುತ್ತ ವಿದ್ಯೆಯಲ್ಲಿ ಪರಂಪರಾಗಿದ್ದ ವಿಶ್ವರಾಧ್ಯರು ಪವಾಡ ಪುರುಷರಲ್ಲಿ ಒಬ್ಬರು ಎಂದು ಚಿಂಚೋಳಿ ತಾಲೂಕಿನ ಐನಾಪೂರದ ವೇ|| ಮೂ|| ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿಗಳು ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ವಿಶ್ವರಾಧ್ಯರ ಪುರಾಣ ಪ್ರವಚನ ಮೊದಲನೆ ಅಧ್ಯಾಯ ಓದುವ ಮೂಲಕ ಪ್ರಾರಂಭಿಸಿದರು.

ಪುರಾಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಿದ್ಯಾನಗರ ವೆಲ್‍ಫೇರ ಸೊಸೈಟಿ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದರು. ಎಂ.ಬಿ. ನಗರ ಪೊಲೀಸ್ ಠಾಣೆಯ ಎ.ಎಸ್.ಐ ಚನ್ನವೀರ, ಮಹಾನಗರಪಾಲಿಕೆಯ ಸದಸ್ಯರಾದ ಶ್ರೀಮತಿ ಯಂಕಮ್ಮ ಗುತ್ತೇದಾರ, ಸೊಸೈಟಿ ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ ಹಾಗು ವೀರಭದ್ರಯ್ಯ ಸ್ಥಾವರಮಠ ಸಂಗೀತ ಸೇವೆ ನೀಡಿದರು.

ಸಮಾರಂಭದಲ್ಲಿ ವಿರೇಶ ನಾಗಶೆಟ್ಟಿ, ಕರಣ ಆಂದೋಲಾ, ಅಮಿತ ಜೀವಣಗಿ, ಶಶಿಧರ ಪ್ಯಾಟಿ, ಸಂಗಮೇಶ ಹೆಬ್ಬಾಳ, ಶಿವರಾಜ ಪಾಟೀಲ, ಸುನೀಲ ಮುತ್ತಾ, ವಿಕಾಸ ತೊರವಿ,

ವಿಶ್ವನಾಥ ರಟಕಲ್, ನಾಗರಾಜ ಹೆಬ್ಬಾಳ, ಆದಪ್ಪ ಸಿಕೇದ ಮಲ್ಲಿಕಾರ್ಜುನ ನಾಗಶೆಟ್ಟಿ, ಶರಣು ಗೊಬ್ಬೂರ, ಬಸವಂತರಾವ ಜಾಬಶೆಟ್ಟಿ, ಬಸವರಾಜ ಪುಣ್ಯಶೆಟ್ಟಿ, ಗುರುಲಿಂಗಯ್ಯ ಮಠಪತಿ, ನಾಗಭೂಷಣ ಹಿಂದೊಡ್ಡಿ, ಹಾಗೂ ಸುತ್ತಮುತ್ತಲಿನ ಬಡಾವಣೆಯ ಜನರು, ನೂರಾರು ಭಕ್ತರು ಉಪಸ್ಥಿತರಿದ್ದರು.