ಪುರಾಣಗಳು ಮಾನವನ ಸನ್ಮಾರ್ಗಕ್ಕೆ ಸಹಕಾರಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.14: ಪುರಾಣ ಪ್ರವಚನಗಳು ಮಾನವರನ್ನು ಸನ್ಮಾರ್ಗದ ಕಡೆ ನಡೆಸಿಕೊಂಡು ಹೋಗಲು ಸಹಕಾರಿ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ಅವರು ನಿನ್ನೆ ಸಂಜೆ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉಜ್ಜಯನಿ ಪೀಠದ ಲಿಂಗೈಕ್ಯ  ಸಿದ್ದಲಿಂಗ ಶಿವಾಚಾರ್ಯರ 87 ನೇ ಪುಣ್ಯಾರಾಧನೆಯ ಅಂಗವಾಗಿ ಗುಡ್ಡಾಪುರ ಶರಣೆ ದಾನಮ್ಮದೇವಿಯ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು‌.
ಕಳೆದ ಹತ್ತು ವರ್ಷಗಳಿಂದ ಇಲ್ಲಿ ಉಜ್ಜಯಿನಿ ಶ್ರೀಗಳ ಪುಣ್ಯಾರಾಧನೆ  ಅಂಗವಾಗಿ ವಿವಿದ ಅವಧೂತರ ಪುರಾಣ ಪ್ರವಚನ ಭಕ್ತ ಸಮೂಹಕ್ಕೆ ಉತ್ತಮವಾದುದಾಗಿದೆ.
ಇಂದಿನ ಅಧುನಿಕ ಬದುಕಿನ ದಿನಗಳಲ್ಲಿ ಸಂಜೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಲಿದೆ. ಬಸವೇಶ್ವರ ನಗರದ ಭಕ್ತರ ಈ ಕಾರ್ಯ ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಬಿಜೆಪಿ ಮುಖಂಡ ಎಸ್.ಮಲ್ಲನಗೌಡ ಮೊದಲಾದವರು ಪಾಲ್ಗೊಂಡಿದ್ದರು.
ಗದಗಿನ ಶಶಿಧರ ಶಾಸ್ತ್ರಿಗಳು ದಿನ‌ನಿತ್ಯ ಸಂಜೆ ಪುರಾಣ ಪ್ರವಚನವನ್ನು ನಡೆಸಿಕೊಟ್ಟುತ್ತಿದ್ದು‌ ಜ.17 ರವರೆಗೆ ನಡೆಯುತ್ತದೆ. ನಿನ್ನೆ ದಾನಮ್ಮ ದೇವಿಯ ವಿವಾಹ ಕಾರ್ಯಕ್ರಮ‌ ನಡೆಯಿತು. ನಾಳೆ ಜ15 ರಂದು ಉಡಿತುಂಬುವ ಕಾರ್ಯ ಇದೆ. ಜ 17 ರಂದು ಬೆಳಿಗ್ಗೆ ಉಜ್ಜಯನಿಯ ಶ್ರೀಗಳಿಂದ ಆಶಿರ್ವಚನ ಇದೆ ಎಂದು ಪುರಾದ ಆಯೋಜಕರ ಸಮಿತಿಯ ಅಧ್ಯಕ್ಷ ಷಡಾಕ್ಷರಿ ಸ್ವಾಮಿಗಳು ತಿಳಿಸಿದ್ದಾರೆ.