ಪುರಸಭೆ ಹೊಸ ಕಟ್ಟಡ ಕಾಮಗಾರಿ ಪರಿಶೀಲನೆ

ಮಸ್ಕಿ,ನ.೧೩- ಇಲ್ಲಿಯ ಹಳೆ ಪುರಸಭೆ ಕಟ್ಟಡ ಬಳಿ ನಡೆದಿರುವ ಹೊಸ ಪುರಸಭೆ ಹೊಸ ಕಟ್ಟಡ ಕಾಮಗಾರಿ ಸ್ಥಳಕ್ಕೆ ಪುರಸಭೆ ಅಧ್ಯಕ್ಷೆ ವಿಜಯ ಲಕ್ಷ್ಮೀ ಪಾಟೀಲ್, ಉಪಾಧ್ಯಕ್ಷೆ ಕವಿತಾ ಮಾಟೂರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು. ಕಟ್ಟಡ ಕಾಮಗಾರಿ ಅಪೂರ್ಣ ಗೊಂಡಿದ್ದು ಕಂಡು ಬೇಸರ ವ್ಯಕ್ತಪಡಿಸಿದರು ಹೊಸ ವರ್ಷ ಜನವರಿ ೨೬ ಒಳಗೆ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲು ಮುಖ್ಯಾಥಿಕಾರಿಗೆ ಸೂಚಿಸಿದರು.
ಈ ಸಂದಂರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಮಾತನಾಡಿ ಪುರಸಭೆ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸುವಂತೆ ಎಂಜಿನಿಯರ್ ಗೆ ಸಾಕಷ್ಟು ಸಲ ಪತ್ರ ಬರೆಯಲಾಗಿದೆ ಜ.೨೬ ರೊಳಗೆ ಪುರಸಭೆ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸುವಂತೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು ಪುರಸಭೆ ಎಂಜಿನಿಯರ್ ಮೀನಾಕ್ಷಿ, ಪುರಸಭೆ ಸದಸ್ಯ ಎಂ. ಅಮರೇಶ, ಮುಖಂಡ ಬಸನಗೌಡ ಪಾಟೀಲ್ , ಪುರಸಭೆ ಅಧಿಕಾರಿಗಳು ಇದ್ದರು.

(೧೨,ನ.ಎಂಎಸ್ಕೆ ಪೋಟೋ೦೧)