ಪುರಸಭೆ ಸದಸ್ಯ ಲಕ್ಷ್ಮಣ್ ಕಲಾಲ್‍ರಿಂದ ಫುಡ್‍ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ :ಮೇ.31 ಪಟ್ಟಣದ ಭೋವಿಕಾಲೋನಿಯ 10 ಮತ್ತು 11ನೇ ವಾರ್ಡ್‍ನಲ್ಲಿ ಬಡವರಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಿ ಕೋವಿಡ್ 2ನೇ ಅಲೆಯಿಂದಾಗಿ ಲಾಕ್‍ಡೌನ್ ಆದ ಈ ಸಂಕಷ್ಟ ಸಂದರ್ಭದಲ್ಲಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ ಎಂದು ಪುರಸಭೆ ಸದಸ್ಯ ಲಕ್ಷ್ಮಣ ಕಲಾಲ್ ಹೇಳಿದರು. ನಮ್ಮ ವಾರ್ಡ್‍ನಲ್ಲಿ ಬಹಳಷ್ಟು ಕೂಲಿಕಾರ್ಮಿಕರು, ಬಡವರು ದಿನ ದುಡಿದು ಉಣ್ಣುವವರಾಗಿದ್ದಾರೆ. ಈ ಲಾಕ್‍ಡೌನ್‍ನಿಂದಾಗಿ ಅವರೆಲ್ಲಾ ಮನೆಯಲ್ಲಿಯೇ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಅವರಿಗೆ ತಾತ್ಕಾಲಿಕವಾಗಿ ಅನುಕೂಲವಾಗಲೆಂದು 500ಕ್ಕೂ ಹೆಚ್ಚು ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸುವ ಮೂಲಕ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಶೋಕ್ ಮತ್ತು ರವಿ ದಲ್‍ಭಂಜನ್ ಭೋವಿ ನಾಗಣ್ಣ, ಮೂರ್ತಿ, ಅಜ್ಜಯ್ಯ, ಅಜ್ಮೀರ್, ಪೇಂಟರ್ ಶಾದಿಕ್, ಇಮಾಮ್ ಮತ್ತಿತರರು ಇದ್ದರು.