
ಚುನಾವಣೆ ಕರ್ತವ್ಯಲೋಪ ಆರೋಪ ಮೇಲೆ ಕ್ರಮ
ದೇವದುರ್ಗ,ಮೇ.೦೭- ಸ್ಥಳೀಯ ಪುರಸಭೆ ವ್ಯವಸ್ಥಾಪಕ ಗಂಗಾಧರರನ್ನು ಚುನಾವಣೆ ಕರ್ತವ್ಯ ಲೋಪ ಆರೋಪದಡಿ ಚುನಾವಣೆ ಆಯೋಗದ ನಿರ್ದೇಶನದಂತೆ ಅಮಾನತು ಮಾಡಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಮಾಡಿದ್ದಾರೆ. ಕ್ಷೇತ್ರದ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ರಾಷ್ಟ್ರಧ್ವಜ ಸಿದ್ದಪಡಿಸಿ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲು ಸೂಚಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿಗೆ ಉದ್ದಟತನ ಹೇಳಿಕೆ ಹಾಗೂ ಕರ್ತವ್ಯ ಲೋಪದ ಆರೋಪದ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ ೧೯೫ರಡಿ ಅಮಾನತು ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನಕುಮಾರ ತಿಳಿಸಿದ್ದಾರೆ.