ಪುರಸಭೆ ವತಿಯಿಂದ ರಾಷ್ಟ್ರದ್ವಜ ಮಾರಾಟ ಮಳಿಗೆ ಆರಂಭ

ತಾಳಿಕೋಟೆ:ಆ.4: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರ ದ್ವಜ ಮಾರಾಟ ಮಾಡಳಿ ಪುರಸಭೆ ಕಾರ್ಯಾಲಯದಲ್ಲಿ ದ್ವಜ ಮಾರಾಟ ಮಳಿಗೆಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರು ಬುಧವಾರರಂದು ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಅವರು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಪ್ರತಿ ಮನೆಗಳ ಮೇಲೆ ನಮ್ಮ ಭಾರತ ದೇಶದ ರಾಷ್ಟ್ರ ದ್ವಜವನ್ನು ಹಾರಿಸಬೇಕೆಂಬ ಸಂಕಲ್ಪದ ಹಿನ್ನೇಲೆ ಎಲ್ಲ ಜನರಿಗೆ ರಾಷ್ಟ್ರ ದ್ವಜಗಳು ಸಿಗಲಿ ಎಂಬ ಉದ್ದೇಶದಿಂದ ಪುರಸಭೆಯ ವತಿಯಿಂದ ದ್ವಜಗಳನ್ನು ತರಿಸಿ ಮಾರಾಟ ಮಳಿಗೆಯನ್ನು ಪ್ರಾರಂಬಿಸಲಾಗಿದೆ 1 ದ್ವಜಕ್ಕೆ 23 ರೂ. ಆಕರಣೆ ಮಾಡಿ ಎಲ್ಲರೂ ದ್ವಜಗಳನ್ನು ಪಡೆದುಕೊಂಡು ಅಗಸ್ಟ 15 ರಂದು ಪ್ರತಿ ಮನೆ ಮನೆಗಳ ಮೇಲೆ ದ್ವಜಗಳನ್ನು ಹಾರಿಸಿ ಭಾರತ ದೇಶದ ಅಭಿಮಾನವನ್ನು ತೋರಿಸಬೇಕೆಂದ ಅವರು ಸದರಿ ಮಾರಾಟ ಮಳಿಗೆಯು ಇದೇ ದಿ.13ರ ವರೆಗೆ ತೆರೆಯಲಿದೆ ಎಂದರು.

ಈ ಸಮಯದಲ್ಲಿ ಪುರಸಭೆ ಆರೋಗ್ಯ ನಿರಿಕ್ಷಕ ಶಿವಾನಂದ ಜುಮನಾಳ, ಆರ್.ವಾಯ್.ನಾರಾಯಣಿ, ಶ್ರೀಪಾದ ಗತ್ತರಗಿ, ಎಸ್.ಎ.ಘತ್ತರಗಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಶ್ರೀಮತಿ ಎಸ್.ವ್ಹಿ.ಕುಲಕರ್ಣಿ, ಮೊದಲಾದವರು ಇದ್ದರು.


ದ್ವಜ ಕೊಂಡುಕೊಳ್ಳಲು ಆಗಮಿಸಿದ ಜನರು

ರಾಷ್ಟ್ರ ದ್ವಜ ಮಾರಾಟ ಮಳಿಗೆ ಪ್ರಾರಂಭವಾಗಿದೆ ಎಂಬ ಸುದ್ದಿಯನ್ನು ಅರೀತ ಪಟ್ಟಣದ ಅನೇಕ ನಾಗರಿಕರು ಪುರಸಭೆ ಕಾರ್ಯಾಲಯದಲ್ಲಿಯ ಮಳಿಗೆಗೆ ಆಗಮಿಸಿ ದ್ವಜಗಳನ್ನು ಕೊಂಡುಕೊಳ್ಳಲು ಸರದಿಸಾಲಿನಲ್ಲಿ ನಿಂತು ಖರೀದಿಸುತ್ತಿರುವದು ಕಂಡುಬಂದಿತು.