ಪುರಸಭೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ :ಪ್ರಭಾಕರ ನಾಗರಾಳೆ

ಹುಮನಾಬಾದ್: ಜ.2:ಇಲ್ಲಿನ ಪುರಸಭೆಯ ವಾರ್ಡ್ ಸಂಖ್ಯೆ4ರ ಉಪಚುನಾವಣೆಯಲ್ಲಿ ಬಿಜೆಪಿಗೆ ಮೂರನೇ ಸ್ಥಾನಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಸೋಲಿಗೆ ನಾವುತೆ ಲೆಬಾಗುವೆವು ಎಂದು ಬಿಜೆಪಿ ಮಂಡಲ ಅಧ್ಯಕ್ಷ. ಪ್ರಭಾಕರ ನಾಗರಾಳೆ ಹೇಳಿದರು.

ಪಟ್ಟಣದ ಶಾಸಕ ಡಾ. ಸಿದ್ದು ಪಾಟೀಲ್ ಅವರ ಗೃಹ ಕಚೇರಿಯಲ್ಲಿ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ್ , ಇದು ಕೇವಲ ಒಂದು ವಾರ್ಡ್ ಚುನಾವಣೆಯಾಗಿದ್ದು, ಬಿಜೆಪಿ 3ನೇ ಸ್ಥಾನದದೆ, ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಮತಗಳನ್ನು ಪಡೆಯುವುದರಲ್ಲಿ ಪಡೆದಿದ್ದರು. ಆದರೆ ಈ ಬಾರಿ 238 ಮತಗಳು ಬಂದಿವೆ. ಬರುವ ದಿನಗಳಲ್ಲಿ ಶಾಸಕ ಸಿದ್ದಲಿಂಗಪ್ಪ ಪಾಟೀಲ ಅವರ ನೇತೃತ್ವದಲ್ಲಿ ಹುಮನಾಬಾದ್ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಸಮಜಾಯಿಸಿ ನೀಡಿದರು. ಮುಂಬರುವ ದಿನಗಳಲ್ಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಶಾಸಕ ಡಾ. ಸಿದ್ದು ಪಾಟೀಲ್ ಮಾಡುತ್ತಿರುವ ಜನಪರ ಕೆಲಸ, ನಮಗೆ ಮುಂದಿನ ಪುರಸಭೆ ಅಧಿಕಾರಕ್ಕೆ ಶ್ರೀರಕ್ಷೆಯಾಗಲಿದೆ ಈ ಬಾರಿಯ ಫಲಿತಾಂಶದಿಂದ ಯಾವುದೇ ಪರಿಣಾಮ ಬೀರಲ್ಲ ಎಂದರು. ಪುರಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದರೆ, ಎಸ್‍ಡಿಪಿಐ ಎರಡನೇ ಸ್ಥಾನದಲ್ಲಿದ್ದು, ನಾವು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಜು ಭಂಡಾರಿ ಸೇರಿದಂತೆ ಇತರರು ಇದ್ದರು.