ಪುರಸಭೆ ಮಳಿಗೆ ಹಂಚಿಕೆಗೆ ಆಯುಕ್ತರಿಗೆ ಮನವಿ

ಮಾನ್ವಿ,ಜ.೨೨- ಪಟ್ಟಣದಲ್ಲಿನ ಟೌನ್‌ಹಾಲ್ ಬಳಕೆಗೆ ಅನುಕೂಲ ಮಾಡುವಂತೆ ಹಾಗೂ ಈಗಾಗಲೇ ಪುರಸಭೆ ಮಳಿಗೆ ಹರಾಜು ಪ್ರಕ್ರಿಯೆ ಮುಗಿದು ಕನಿಷ್ಠ ನಾಲ್ಕು ತಿಂಗಳು ಗತಿಸಿದರು. ಹರಾಜು ಪಡೆದವರಿಗೆ ಮಳಿಗೆಯನ್ನು ನೀಡುತ್ತಿಲ್ಲ. ಆದರಿಂದ ಕೂಡಲೇ ಪುರಸಭೆ ಅಧಿಕಾರಿಗಳು ಇದನ್ನು ಪೂರ್ಣಗೊಳಿಸಲು ಆದೇಶ ನೀಡುವಂತೆ ವಿವಿಧ ಪರ ಸಂಘಟನೆಯ ಮುಖಂಡರು ರಾಯಚೂರು ಜಿಲ್ಲಾ ಉಪ ವಿಭಾಗದ ಸಹಾಯಕ ಆಯುಕ್ತ ರಜನಿಕಾಂತ್ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಭುರಾಜ ಕೊಡ್ಲಿ, ಎಸ್ ಎಂ ಶಾಹನವಾಜ್, ರಾಯಪ್ಪ, ಸುರೇಶ ನಾಡಗೌಡ, ಈರಣ್ಣ ಗವಿಗಟ್ಟ, ಮೈನುದ್ದೀನ್, ಎಲಿಯಾಸ್, ರಮೇಶ,ಶಾಹಿದ್, ಪಂಪಾಪತಿ ಹಡದ್, ರಾಮಣ್ಣ ಸೇರಿದಂತೆ ಇತರರು ಇದ್ದರು.