ಪುರಸಭೆ ಮಳಿಗೆಯನ್ನು ಹಾಲಿ ಬಾಡಿಗೆದಾರರಿಗೆ ನೀಡಲಿ

ಮಾನ್ವಿ,ಜೂ.೨೬-
ತಾಲೂಕಿನ ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ಪುರಸಭೆಯ ವಾಣಿಜ್ಯ ಮಳಿಗೆಯನ್ನು ಹಾಲಿ ಬಾಡಿಗೆದಾರರಿಗೆ ಮುಂದುವರಿಸುವಂತೆ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ ಜಿಲ್ಲಾ ಸಹಾಯ ಆಯುಕ್ತರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಕಳೆದ ಬಾರಿ ಟೆಂಡರ್ ಅವಧಿಯು ಸಂಪೂರ್ಣ ಮುಗಿದಿದ್ದು ಹಾಗೂ ಜಿಲ್ಲಾಧಿಕಾರಿಗಳ ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ಅದನ್ನು ರದ್ದು ಮಾಡಿ ಮರು ಟೆಂಡರ್ ಮಾಡುವಂತೆ ಆಗ್ರಹಿಸಿದರು.
ಪ್ರಮುಖವಾದ ಹರಾಜಿನಲ್ಲಿ ಟೆಂಡರ್ ಪಡೆದವರು ಮುಂಗಡ ಭಾಗಶಃ ಹಣವನ್ನು ನೀಡದೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯಾಗಿದೆ ಆದರೂ ಕೂಡ ಸಹಾಯಕ ಆಯುಕ್ತರು ಹಾಗೂ ಪುರಸಭೆ ಅಧಿಕಾರಿಗಳು ಏಕಾಏಕಿ ದಾಳಿ ದಾಳಿ ಮಾಡಿ ಬೀಗ ಮುರಿಯುವುದಕ್ಕೆ ಮುಂದಾಗಿರುವುದು ದುರದೃಷ್ಟಕರ ವಿಷಯವಾಗಿದೆ ಹಾಗೂ ಸರ್ಕಾರದ ಆದೇಶದಂತೆ ಪ್ರತಿಯೊಂದು ಮಳಿಗೆಗೆ ಹೆಚ್ಚಿನ ದರ ನಿಗಧಿ ಮಾಡಿದ್ದು ಹಾಲಿ ಬಾಡಿಗೆದಾರರಿಗೆ ತುಂಬಾ ಕಷ್ಟವಾಗುತ್ತಿದೆ ಇದನ್ನು ಗಮನ ಹರಿಸಿ ಮರು ಟೆಂಡರ್ ಕರೆಯಬೇಕು ಇಲ್ಲವಾದಲ್ಲಿ ವಾರದೊಳಗೆ ನಮ್ಮ ಸಂಘಟನೆಯಿಂದ ಬಸವ ವೃತ್ತದಿಂದ ತಾಲೂಕ ದಂಡಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ ಎಂದರು.
ನಂತರ ಮುಖಂಡ ದೇವರಾಜ ಮಾತಾನಾಡಿ ಸಂವಿಧಾನಾತ್ಮಕ ಕಾನೂನು ಮರೆತು ನಿಯಮಗಳನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ಹಿತಶಕ್ತಿಗೆ ದಕ್ಕೆ ತರುತ್ತಿದ್ದಾರೆ ೪೦ ಮಳಿಗೆಗಳನ್ನು ಹಾಲಿ ಇರುವ ಬಾಡಿಗೆದಾರರಿಗೆ ನೀಡಬೇಕು ಎಂದು ಕಾನೂನು ರೀತಿಯಲ್ಲಿ ಟೆಂಡರುದಾರರ ೫೦ ಸಾವಿರವನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ಸಂಘದ ಮುಖಂಡರಾದ ಬಿ.ಎನ್ ಯರಿದಾಳ್, ರಮೇಶ ಪಾಟೀಲ್ ಬೇರ್ಗಿ, ವೆಂಕೋಬ ನಾಯಕ, ಮಲ್ಲೇಶ ಮದ್ಲಾಪೂರು, ವಿರೇಶ, ಬಸವರಾಜ, ವಿರೇಶ ಇದ್ದರು.