ಪುರಸಭೆ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಗುಳೇದಗುಡ್ಡ ಜೂ.11- ಪಟ್ಟಣದ ಪುರಸಭೆ ಪೌರ ಕಾರ್ಮಿಕ ವರ್ಗದವರಿಗೆ ನಗರದ ಭಾಜಪ ಯುವ ಮೋರ್ಚಾ ವತಿಯಿಂದ ಪಟ್ಟಣದ ಮಾಜಿ ಶಾಸಕ ರಾಜಶೇಖರ ಶೀಲವಂತ ನೇತೃತ್ವದಲ್ಲಿ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು, ಕೊರೊನಾದ 2ನೇ ಅಲೆಯ ಹೊಡೆತದ ಪರಿಣಾಮವಾಗಿ ತಮ್ಮ ಆರ್ಥಿಕ ಪರಿಸ್ಥಿತಿಯಿಂದ ಪೌರ ಕಾರ್ಮಿಕ ವರ್ಗದವವರು ಸಹ ಕಂಗಾಲಾಗಿದ್ದಾರೆ. ಇವರ ಜೀವನ ಈಗ ಚಿಂತಾಜನಕವಾಗಿದೆ. ಇಂತಹ ವಿಷಮ ಪರಸ್ಥಿತಿಯಲ್ಲಿ ಮನೆ ನಡೆಸುವುದು ಅವರಿಗೆ ಕಷ್ಟವಾಗಿದೆ. ಆದುದರಿಂದ ಭಾಜಪ ಯುವ ಮೋರ್ಚಾ ವತಿಯಿಂದ ಪುರಸಭೆ ಪೌರಕಾರ್ಮಿಕ ವರ್ಗದವರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಿದ್ದೇವೆ. ಇದಕ್ಕೆ ಶ್ರಮವಹಿಸಿದ ನಮ್ಮ ಭಾಜಪ ಯುವ ಮೋರ್ಚಾದವರು ಸಂಕಷ್ಟದಲ್ಲಿವರ ನೆರವಿಗೆ ಧಾವಿಸಿದ್ದಾರೆ. ಇವರ ಕಾರ್ಯ ಶ್ಲಾಘನೀಯ ಮತ್ತು ಅನನ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಕಳೆದ ಒಂದು ವಾರದ ಹಿಂದೆ ಸಹ ನಮ್ಮ ಭಾಜಪ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಹಿಮುನಿಟಿ ಬೂಸ್ಟರ್, ಆಹಾರ ಪೊಟ್ಟಣಗಳ ಕಿಟ್‍ಗಳನ್ನು ಅಟೋ ಚಾಲಕರಿಗೆ, ಪೆಂಡಾಲ ಕಾರ್ಮಿಕರಿಗೆ ಕೊಟ್ಟಿದ್ದು ನಮ್ಮ ಕಾರ್ಯಕರ್ತರ ಮಾನವೀಯತೆಯನ್ನು ಏತ್ತಿ ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗುಳೇದಗುಡ್ಡ ಪಟ್ಟಣದ ಪುರಸಭೆ ಸದಸ್ಯರಾದ ಪ್ರಶಾಂತ ಜವಳಿ, ಕಾಶಿನಾಥ ಕಲಾಲ, ರಾಜ್ಯ ಭಾಜಪ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ, ಉಪಾಧ್ಯಕ್ಷ ಪ್ರಕಾಶ ಶೃಂಗೇರಿ, ಈರಣ್ಣ ಅಂಗಡಿ, ವಿಠ್ಠಲ ಯತ್ನಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆನಂದ ಇಂಗಳಗಾವಿ, ನಗರ ಭಾಜಪ ಯುವ ಮೋರ್ಚಾ ಅಧ್ಯಕ್ಷ ರಾಜು ಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನೇಶ ಪೂಜಾರ, ಮುತ್ತು ಚಿಕ್ಕನರಗುಂದ, ಮಣಿಕಂಠ ಎಣ್ಣಿ, ಮಹಾಂತೇಶ ಹಿರೇಮಠ, ಪ್ರಭು ಕಳ್ಳಿಗುಡ್ಡ, ಚೇತನ ಪಸಾರಿ, ಹರೀಶ್ ಪರಗಿ, ಸಿದ್ದು ಹಿರೇಮಠ, ಶಿವು ಬಾದವಾಡಗಿ, ಅಕ್ಷಯ ವರ್ಮಾ, ಪರಶುರಾಮ ಕಲಾಲ ಸೇರಿದಂತೆ ಮತ್ತಿತರರಿದ್ದರು.