ಪುರಸಭೆ ಪೌರ ಕಾರ್ಮಿಕನಿಗೆ 2.5ಲಕ್ಷದ ಚೆಕ್ ವಿತರಿಸಿದ ಶಾಸಕ ತೇಲ್ಕೂರ

ಸೇಡಂ,ನ,22: ತಾಲೂಕಿನ ಪುರಸಭೆಯ ಪೌರಕಾರ್ಮಿಕನಾದ ದಾನಪ್ಪ ತಂದೆ ದೇವಪ್ಪ ಅವರ ಮನೆ ನಿರ್ಮಿಸಿ ಕೊಳ್ಳುವುದಕ್ಕೆ 2.5 ಲಕ್ಷದ ಚೆಕ್ ನ್ನು ಈಕರಸಾ ಅಧ್ಯಕ್ಷರು ತಾಲೂಕಿನ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆಯ ನೂತನ ಅಧ್ಯಕ್ಷರಾದ ಶ್ರೀಮತಿ ಚೆನ್ನಮ್ಮ ಬಿ ಪಾಟೀಲ್, ಉಪಾಧ್ಯಕ್ಷರಾದ ಶಿವಾನಂದ ಸ್ವಾಮಿ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ಪರಿಸರ ಅಭಿಯಂತರೆ ಪ್ರಿಯಾಂಕ ವಿಭೂತಿ, ಬಿಜೆಪಿಯ ನಗರಾಧ್ಯಕ್ಷರಾದ ಅನಿಲ್ ಐನಾಪುರ್, ಪ್ರಭುಲಿಂಗಯ ಸ್ವಾಮಿ, ವೆಂಕಟೇಶ ಪಾಟೀಲ್ ಇದ್ದರು.