ಪುರಸಭೆ ನಿರ್ಲಕ್ಷ್ಯ ಅವೈಜ್ಞಾನಿಕ ಬ್ಯಾನರ್ ಅಳವಡಿಕೆ

ಮಾನ್ವಿ,ಜೂ.೨೧-
ಮಂಗಳವಾರ ರಾತ್ರಿ ಬೀಸಿದ ಗಾಳಿಗೆ ವಾಲ್ಮೀಕಿ ವೃತ್ತದಲ್ಲಿ ಅಳವಡಿಸಿರುವ ಬ್ಯಾನರ್ ಒಂದು ರಸ್ತೆಯಲ್ಲಿ ಹೋಗುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದರಿಂದ ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಾರ್ವಜನಿಕರ ಕೂಡಲೇ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಸಾರ್ವಜನಿಕರು ತಿಳಿಸಿದರು.
ಅವೈಜ್ಞಾನಿಜವಾಗಿ ಪಟ್ಟಣದ ಪ್ರಮುಖವಾದ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ಬ್ಯಾನರ್ ಗಳನ್ನು ಅಳವಡಿಸುವುದಕ್ಕೆ ಪುರಸಭೆಯವರು ಅವಕಾಶ ನೀಡಬಾರದು ರಾಯಚೂರು ಸಿಂಧನೂರು ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಈ ರೀತಿಯ ಬ್ಯಾನರ್‌ಗಳನ್ನು ಅಳವಡಿಸುವುದರಿಂದ ಪ್ರಾಣಪಾಯ ಸಂಭವಿಸಬಹುದಾಗಿದು ಕೂಡಲೇ ಪುರಸಭೆಯವರು ಬ್ಯಾನರ್‌ಗಳನ್ನು ಬಳಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.