ಪುರಸಭೆ ಚುನಾವಣೆ ಎರಡು ಗುಂಪುಗಳ ನಡುವೆ ವಾಗ್ವಾದ

ಹಗರಿಬೊಮ್ಮನಹಳ್ಳಿ.ನ.೦೭ ಭಾರಿ ಕುತೂಹಲ ಕೆರಳಿಸಿರುವ ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಏರ್ಪಟ್ಟಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೂಗಾಟ, ಚೀರಾಟ, ನೂಕಾಟ ನಡೆದ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತರನ್ನು ಹರಸಾಹಸ ಮಾಡಬೇಕಾಯಿತು. ಶಾಸಕ ಭೀಮಾನಾಯ್ಕ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ನಡುವೆ ವಾದ ವಿವಾದ ಏರ್ಪಟ್ಟಿತ್ತು. ಇದನ್ನು ಪೊಲೀಸರು ಇಬ್ಬರ ಕಡೆ ಸಮಾಧಾನಿಸಲು ಹೋರಾಟ ಮಾಡಬೇಕಾದ ಪ್ರಸಂಗ ನಡೆಯಿತು.