ಪುರಸಭೆ ಕಾರ್ಯಾಲಯಕ್ಕೆ ಶಾಸಕರ ಭೇಟಿ,ಅಹವಾಲು ಸ್ವೀಕಾರ

ಗುರುಮಠಕಲ್:ಆ.9: ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಕ್ಷೇತ್ರದ ಶಾಸಕರಾದ ಸನ್ಮಾನ್ಯೆ ಶ್ರೀ ಶರಣುಗೌಡ ಕಂದಕೂರ ರವರು ತಾಲೂಕಿನ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ವಿಚಾರಿಸಿ ಮಾಹಿತಿ ತೆಗೆದು ಕೊಂಡು ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನತೆಗೆ ನಾನು ನಿಮ್ಮ ಮನೆಯಲ್ಲಿನ ಒಬ್ಬ ಸಹೋದರನಾಗಿ ಮನೆಯ ಮಗನಾಗಿ ನಿಮ್ಮೆಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸುವ ಪಣತೊಟ್ಟಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮಾಡುವೆ ನಾಗರಿಕರು ತಮ್ಮ ಕುಂದುಕೊರತೆಗಳ ಬಗ್ಗೆ ನನ್ನ ಗಮನಕ್ಕೆ ತಂದಲ್ಲಿ ಪರಿಹರಿಸುವ ಭರವಸೆ ನೀಡುವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ. ಪಾಪಣ್ಣ ಮನ್ನೆ. ಶರಣು ಆವುಂಟಿ. ಪ್ರಕಾಶ ನಿರೇಟಿ. ಜಿ ತಮ್ಮಣ್ಣ. ಆಶಣ್ಣ ಬುದ್ದ.ಗುರುನಾಥ ತಲಾರಿ. ಲಾಲಪ್ಪ. ಸುರೇಶ್ ಚಿನ್ನ ರಾಠೋಡ. ಮಹ್ಮದ್ ಮೌಲಾನ. ಶಿವಕುಮಾರ. ಹನಮಂತು ಇತರರು ಇದ್ದರು.