ಪುರಸಭೆ ಕಾರ್ಮಿಕರ ದಿನಾಚರಣೆ-ಮೆರವಣಿಗೆ

ದೇವದುರ್ಗ.ಸೆ.೩೦- ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಪುರಸಭೆಯಿಂದ ಮೆರವಣಿಗೆ ಜರುಗಿತು.
ಸಾರ್ವಜನಿಕ ಕ್ಲಬ್ ಮುಂದೆ ಪುರಸಭೆ ಮುಖ್ಯ ಅಧಿಕಾರಿಗಳಾದ ಕೆ.ಹಂಪಯ್ಯ ಮೆರವಣಿಗೆ ಚಾಲನೆ ನೀಡಿದರು. ಪಟ್ಟಣದ ವಿವಿಧ ಬಡಾವಣೆಯಲ್ಲಿ ಪುರಸಭೆ ನೌಕರರು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಮಿನಿವಿಧಾನಸೌಧ, ಕೆಇಬಿ ರಸ್ತೆ, ಜೆಪಿ ವೃತ್ತ, ಬಸ್ ನಿಲ್ದಾಣದ ಮೂಲಕ ಖೇಣೇದ್ ಫಂಕ್ಷನ್ ಹಾಲ್‌ನವರೆಗೆ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಿ ಪಂಪಣ್ಣ ನಾಗರಾಜ್ ಗೂಗಿ, ಆಂಜನೇಯ ನಾಯಕ್ ದಫೇದಾರ್, ಬಸವರಾಜ್, ಗಂಗಾಧರ್, ಸರ್ದಾರ್ ಅನಿಲ್ ಕುಮಾರ್, ಶೃತಿ, ಅಂಬಿಕಾ, ಪ್ರಕಾಶ್, ತಾಯಪ್ಪ, ನೈರ್ಮಲ್ಯ ಅಧಿಕಾರಿ ಲಿಂಗನಗೌಡ, ಇಸಾಕ್, ಕಸಾಪ ತಾಲೂಕು ಅಧ್ಯಕ್ಷ ಎಚ್..ಶಿವರಾಜ್, ಪುರಸಭೆ ಆಡಳಿತದ ಸಿಬ್ಬಂದಿ ವರ್ಗ ಮತ್ತು ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.