ಪುರಸಭೆ ಕಛೇರಿ:ಅಂಬೇಡ್ಕರ್ ಜಯಂತಿ ಆಚರಣೆ

ಲಿಂಗಸುಗೂರು.ಏ.೧೪-ಪುರಸಭೆ ಕಛೇರಿಯಲ್ಲಿ ಇಂದು ಬೆಳಗ್ಗೆ ಪುರಸಭೆ ಕಾರ್ಯಾಲಯದಲ್ಲಿ ಸರಳವಾಗಿ
ಡಾಕ್ಟರ್ ಬಿ.ಆರ್.ಅಂಬೇಡ್ಕರ್ ೧೩೦ನೇ ಜಯಂತಿ ಆಚರಣೆ ಮಾಡಲಾಯಿತು.
ಅಂಬೇಡ್ಕರ್ ಶೋಷಿತ ಸಮುದಾಯಗಳ ವಿಶ್ವ ಮಾನವ ಅಂಬೇಡ್ಕರ್ ಅವರ ಜಯಂತಿ ಆಚರಣೆ
ಕೇವಲ ದಲಿತ ಸಮಾಜಕ್ಕೆ ಸಿಮಿತವಾಗಿದೆ ಎಂದು ಶಿವಲಿಂಗ ಮೇಗಳಮನಿ ವಿಶಾದವೆಕ್ತಪಡಿಸಿದರು.
ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಸಮಾನತೆ ಮತ್ತು ಮಹಿಳಾ ಸಬಲೀಕರಣ ಹಾಗೂ
ಎಲ್ಲಾ ಜನಾಂಗಗಳ ಒಳಿತಿಗಾಗಿ ಸಂವಿಧಾನ ರಚನೆ ಮಾಡಿ ಸರ್ವರಿಗೂ ಸಮಬಾಳು ಸಮಪಾಲು ಎಂದು ದ್ಯೆಯ ವಾಕ್ಕೆದೊಂದಿಗೆ ಸಂವಿಧಾನದ ಮೂಲಕ ಸಮಾನತೆ ಸ್ವಾತಂತ್ರ್ಯ ತಂದುಕೊಟ್ಟ ಮಾಹನ್ ನಾಯಕರ ಜಯಂತಿ ಆಚರಣೆ ಸರಳವಾಗಿ ಆಚರಿಸಲಾಯಿತು. ಕಾರಣ ಉಪ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸರ್ಕಾರದ ಪ್ರಕಾರ ಹಾಗೂ ಕೋವಿಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇಂದಿನ ಅಂಬೇಡ್ಕರ್ ಜಯಂತಿಯ ಸರಳವಾಗಿ ಆಚರಿಸಲಾಯಿತು. ಎಂದು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಹೆಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗದ್ಧೆಮ್ಮ ಯಮನುರ, ಬೋವಿ ಉಪಾಧ್ಯಕ್ಷ ಎಂಡಿ ರಫೀ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೊದ ಕುಲಕರ್ಣಿ, ಸದಸ್ಯರಾದ ರುದ್ರಪ್ಪ ಬ್ಯಾಗಿ ಯಮನಪ್ಪ, ದೇಗುಲಮಡಿ ಮುತ್ತಣ್ಣ ಮೇಟಿ, ಎಂ.ಜಿಲಾನಿ, ಪುರಸಭೆ ಕಛೇರಿಯ ಮ್ಯಾನೇಜರ್ ವೆಂಕಟೇಶ್, ರಾಘವೇಂದ್ರ, ಎಕ್ಬಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.