ಪುರಸಭೆ ಆಯವ್ಯಯ ಪೂರ್ವಭಾವಿ ಸಭೆ ಮುಂದೂಡಿಕೆ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.10: ಪಟ್ಟಣದ ಪುರಸಭೆಯಲ್ಲಿ ಗುರುವಾರ ಕರೆದಿದ್ದ ಪ್ರಸಕ್ತ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಮುಂದೂಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಕೆಲ ವರ್ಡ್ ಸದಸ್ಯರು ಭಾಗವಹಿಸಿದ್ದರು.
ಪುರಸಭೆ ಆಡಳಿತಾಧಿಕಾರಿ ಸಹಾಯಕ ಆಯುಕ್ತ ಹೇಮಂತ್ ಅವರ ಅಧ್ಯಕ್ಷತೆಯಲ್ಲಿ ಎಂದು ನೋಟೀಸ್ ನೀಡಲಾಗಿತ್ತು. ಅವರು ಬಾರದ ಕಾರಣ ಸಭೆಯನ್ನು ಮುಂದೂಡಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕಚೇರಿಗೆ ಬರುವ ಜನರಿಗೆ ಸೇವೆ ದೊರೆಯುತ್ತಿಲ್ಲ, ಎಂದು ಸದಸ್ಯರು ಆರೋಪಿಸಿದರು. ಸಭೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿಯಿತು ಸಭೆಯನ್ನು ಮುಂದೂಡಲಾಯಿತು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಮೊಹಬೂಬ್ ಬಾಷಾ, ಎಂಜಿನಿಯರ್ ವಿನಯ್ ಇದ್ದರು.

One attachment • Scanned by Gmail