ಪುರಸಭೆ ಆಡಳಿತ ಕಾಂಗ್ರೆಸ್ ಪಾಲು

ಮಾಲೂರು.ನ೧೧: ಪಟ್ಟಣದ ಪುರಸಭೆಯಲ್ಲಿ ಬಿಜೆಪಿಯ ನಿರಂತರ ೧೫ ವರ್ಷಗಳ ಆಡಳಿತ ಕೊನೆಗಾಣಿಸಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿಯುವಂತಾಗಿದೆ.
ಒಟ್ಟು ೨೭ ಮಂದಿ ಸದಸ್ಯ ಬಲದ ಮಾಲೂರು ಪುರಸಭೆಯ ಸದಸ್ಯರ ಸ್ಥಾನಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ೧೧ ಮಂದಿ ಬಿಜೆಪಿ ೧೦ ಮಂದಿ ಜೆಡಿಎಸ್‌ನ ಒಂದು ಪಕ್ಷೇತರರಾಗಿ ೫ ಮಂದಿ ಗೆಲವು ಸಾದಿಸಿದ್ದರು ಈ ಪೈಕಿ ಪಕ್ಷೇತರ ಸದಸ್ಯ ಎನ್.ವಿ. ಮುರಳೀಧರ ಆರಂಭದಲ್ಲಿಯೇ ಶಾಸಕ ಕೆ.ವೈ.ನಂಜೇಗೌಡರ ಒಡನಾಡಿಯಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು.ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ೪ನೇ ವಾರ್ಡಿ ನ ಮೀಸಲು ಕ್ಷೇತ್ರದದಿಂದ ಎರಡನೆ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಎನ್.ವಿ. ಮುರಳೀಧರ ಕಾಂಗ್ರೆಸ್ ಪಕ್ಷದ ಅಧಕ್ಷ ಸ್ಥಾನದ ಅಭರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೆ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಭಾರತಮ್ಮ ಶಂಕರಪ್ಪ ಉಪಾಧಕ್ಷಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯ ಅನಿತಾ ನಾಗರಾಜು ಅಧಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್‌ಸಂಖ್ಯೆ ೧೯ರ ಮಂಜುಳಾ ನಾಮಪತ್ರ ಸಲ್ಲಿಸಿದ್ದು ಚುನಾವಣೆ ಪ್ರಕ್ರಿಯೇಗಳ ನಡೆದು ಕಾಂಗ್ರೆಸ್ ಪಕ್ಷದ ಅಭರ್ಥಿಗಳ ಪರವಾಗಿ ಶಾಸಕರ ಮತವೂ ಸೇರಿ ೧೫ ಮಂದಿ ತಮ್ಮ ಹಕ್ಕು ಚಲಾಯಿಸಿದರು ಬಿಜೆಪಿಯ ಪರವಾಗಿ ಸಂಸದ ಎಸ್ ಮುನಿಸ್ವಾಮಿ ಮತ್ತು ಮೂರು ಮಂದಿ ಪಕ್ಷೇತರ ಸದಸ್ಯರ ಮತಗಳಿಂದ ೧೩ಮತಗಳು ದಾಖಲಾಗಿದ್ದವು. ಚುನಾವಣಾಕಾರಿಯಾಗಿದ್ದ ತಹಶೀಲ್ಧಾರ್ ಎಂ.ಮಂಜುನಾಥ್ ಕಾಂಗ್ರೆಸ್‌ನ ಮುರಳೀಧರ ಹಾಗೂ ಭಾರತೀ ಶಂಕರಪ್ಪ ಅವರ ಆಯ್ಕೆಯನ್ನು ಪ್ರಕಟಿದ್ದಾರೆ. ವಾರ್ಡ್‌ಸಂಖ್ಯೆ ೧೨ ರಿಂದ ಬಿಜೆಪಿ ಅಭರ್ಥಿಯಾಗಿ ಗೆಲುವು ಸಾದಿಸಿದ್ದ ವಿಜಯಲಕ್ಷ್ಮಿ ಕೃಷ್ಣಪ್ಪ ಚುನಾವಣೆಯಲ್ಲಿ ಗೈರು ಹಾಜರಾಗಿದ್ದರು.