ಪುರಸಭೆ ಅಧ್ಯಕ್ಷ, ಉಪಧ್ಯಾಕ್ಷ ಅಧಿಕಾರ ಮುಕ್ತಾಯ

ಲಿಂಗಸುಗೂರು,ಮೇ.೧೯- ತಾಲೂಕಿನ ಪುರಸಭೆ ಹಾಗೂ ಪಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರದ ಅವಧಿ ಮುಕ್ತಾಯವಾಗಿದ್ದರಿಂದ ನಗರಾಭಿವೃದ್ಧಿ ಇಲಾಖೆ ಪುರಸಭೆಗಳ ಕಾಯ್ದೆ ೧೯೬೪ ರ ಕಲಂ ೪ರ ಉಪ ಕಲಂ-೫ ರಲ್ಲಿ, ಅಧ್ಯಕ್ಷ ಉಪಾಧ್ಯಕ್ಷ ಸ್ನಾನಗಳ ಅಧಿಕಾರ ಅವದಿಯು ಮುಗಿದಿದ್ದು, ಆದರಿಂದ ಕರ್ನಾಟಕ ಪುರಸಭಗಳ ಕಾಯ್ದೆ ೧೯೬೧ ರ ಕಲಂ-೩೧೫ ರನ್ವಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆಡಳಿತಾ ಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪುರಸಭೆಗಳ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ ಮುಕ್ತಾಯವಾಗಿದ್ದರಿಂದ ಮುಂದಿನ ಚುನಾವಣೆ ನಡೆಸುವವರೆಗೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಲಿಂಗಸುಗೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ ಏ.೨೯ರಂದು, ಮುದಗಲ್ ಪುರಸಭೆ ಏ.೨೩ರಂದು ಹಾಗೂ ಹಟ್ಟಿ ಪಪಂ ಮೇ ೯ರಂದು ಅಧಿಕಾರ ಅವಧಿ ಮುಕ್ತಾಯ ಆಗಿದ್ದರಿಂದ ಲಿಂಗಸುಗೂರು ಮತ್ತು ಮುದಗಲ್ ಪುರಸಭೆಗಳಿಗೆ ಸಹಾಯಕ ಆಯುಕ್ತರನ್ನು ಹಾಗೂ ಹಟ್ಟಿ ಪಪಂಗೆ ತಹಶೀಲ್ದಾರರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.