ಪುರಸಭೆ ಅಧ್ಯಕ್ಷೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸನ್ಮಾನ

ಹುಮನಾಬಾದ್ :ನ.7: ಪುರಸಭೆಗೆ ಕಳೆದ 2019ರ ಮೇ ತಿಂಗಳಲ್ಲಿ ಚುನಾವಣೆ ನಡೆದು ನ್ಯಾಯಾಲಯ ತಡೆ ಕಾರಣಾಂತರಗಳಿಂದ ತಡೆ ಹಿಡಿಯಲಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಶುಕ್ರವಾರ ನಡೆಯಿತು.

27 ವಾರ್ಡಗಳು ಇದ್ದು. ಕಾಂಗ್ರೆಸ್ 19 ಬಿಜೆಪಿ 4, ಜೆಡಿಎಸ್ 3 ಹಾಗೂ ಸ್ವತಂತ್ರ ಅಭ್ಯಾರ್ಥಿ 1 ಚುನಾವಣೆಯಲ್ಲಿ ಪುರಸಭೆ ಸದಸ್ಯರಾಗಿ ಆಯ್ಕೆ ಗೊಂಡಿದ್ದರು.

ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ ಇದ್ದ ಕಾರಣ ಕಸ್ತೂರಬಾಯಿ ನರಸಪ್ಪ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲಗಲಿಸಿದರೆ. ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಹಿನ್ನಲ್ಲೆ ಸತ್ಯವತಿ ಎಸ್.ಆರ್ ಮಠಪತಿ ಚುನಾವಣೆ ಅಧಿಕಾರಿಯಾದ ತಹಸೀಲ್ದಾರ ನಾಗಯ್ಯ ಹಿರೇಮಠ ಇವರಲ್ಲಿ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಪರಿಶೀಲಿಸಿದ ಬಳಿಕ ಪುರಸಭೆಯ ಸದಸ್ಯರ ಸಭೆ ಕರೆಯುವ ಮೂಲಕ ಅಧ್ಯಕ್ಷರಾಗಿ ಕಸ್ತೂರಬಾಯಿ ನರಸಪ್ಪ, ಉಪಾಧ್ಯಕ್ಷೆಯಾಗಿ ಸತ್ಯವತಿ ಎಸ್.ಆರ್. ಮಠಪತಿ ಅವರನ್ನು ಅವಿರೋಧವಾಗಿ ಆಯ್ಕೆ ಅಧಿಕೃತ ಘೋಷಣೆ ಮಾಡಿದರು.

ಎಂಎಲ್ಸಿ ಅರವಿಂದ ಅರಳಿ, ಡಾ. ಚಂದ್ರಶೇಖರ ಪಾಟೀಲ, ತಾಪಂ. ಅಧ್ಯಕ್ಷ ರಮೇಶ ಡಾಕುಳಗಿ, ಚಿಟಗುಪ್ಪ ತಹಸೀಲ್ದಾರ್ ಜೀಯಾವುದ್ದಿನ್, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ತಾಪಂ. ಮಾಜಿ ಅಧ್ಯಕ್ಷ ಶಿವರಾಜ ಗಂಗಶಟ್ಟಿ, ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಮಲ್ಲಿಕಾರ್ಜುನ್ ಮಾಶಟ್ಟಿ, ಪುರಸಭೆ ಸದಸ್ಯರಾದ ಸುನೀಲ ಪಾಟೀಲ, ರಮೇಶ ಕಲ್ಲೂರ, ಅನಿಲ ಪಲ್ಲೇರಿ, ಅಫ್ಸರಮಿಯ್ಯ, ಪಾರ್ವತಿ ಶೇರಿಕಾರ, ವೀರೇಶ ಸೀಗಿ, ಮುಕರಮ್, ಸವಿತಾ ಸೊಂಡೆ, ವಿಜಯಕುಮಾರ ದುರ್ಗದ್, ಗುಂಡಪ್ಪ, ತಾಪಂ. ಮಾಜಿ ಅಧ್ಯಕ್ಷ ಶಿವರಾಜ ಗಂಗಶಟ್ಟಿ, ಬಾಬುರಾವ ಪರಮಶಟ್ಟಿ, ಮಹೇಶ ಪಾಟೀಲ್, ಗುಂಡಪ್ಪ, ರೇಷ್ಮಾ, ಇಸರತ್ ಸುಲ್ತಾನಾ, ಸೈಯದ್ ಅಬ್ದುಲ್, ಸವಿತಾ ಅಶೋಕ, ಮುಖರಂಜಾ, ದೇಸಾಯಿ, ಈಶ್ವರ, ಸಂಗಪ್ಪ, ಜಾವೆದ್, ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.