
ಮುದಗಲ್ಲ,ಫೆ.೨೮-
ಮುದಗಲ್ಲ ಪುರಸಭೆಯಲ್ಲಿ ೨೦೨೩-೨೪ ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.
ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ನೈರ್ಮಲ್ಯ ಅಧಿಕಾರಿ ಆರಿಫಾ ಉನ್ನಿಸಾ ಬಜೆಟ್ ಪತ್ರಿಕೆ ಓದಿದರು. ರೂ.೧೨.೭೫ ಕೋಟಿ ವಿವಿಧ ಮೂಲಗಳಿಂದ ಜಮಾ ಆಗುತ್ತದೆ. ಎಸ್.ಎಫ್.ಸಿ ವೇತನ, ಜನಗಣತಿ, ವಿದ್ಯುತ್ ಅನುದಾನ ಸೇರಿದಂತೆ ವಿವಿಧಕ್ಕೆ ಸಾಮಗ್ರಿಗಳಿಗೆ ರೂ.೧೨.೭೫ ಕೋಟಿ ಖರ್ಚು ಮಾಡಲಾಗುತ್ತದೆ ಎಂದು ಬಜೆಟ್ ಮಂಡನೆ ಮಾಡಿದರು.
ಪುರಸಭೆ ವಾಟರ್ ಮ್ಯಾನ್ ಸಿಬ್ಬಂದಿಗಳಿಗೆ ೧೦ ತಿಂಗಳಿಂದ ವೇತನ ಆಗಿಲ್ಲ. ವೇತನ ಮಾಡಬೇಕೆಂದು ಸಿಬ್ಬಂದಿಗಳು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ನಾಯಕ, ರಾಬಿಯಾ ಬೇಗಂ, ಜಯಶ್ರೀ ಶಂಕ್ರಪ್ಪ ಜೀಡಿ, ಶಬ್ಬೀರ್ ಪಾಷ, ಅಮೀರ್ ಬೇಗ್ ಉಸ್ತಾದ್, ತಸ್ಲೀಂ ಮುಲ್ಲಾ, ಅಮೀನಾ ಬೇಗಂ ಮಹೆಬೂಬ ಬಾರಿಗಿಡ್, ವಿಜಯಲಕ್ಷ್ಮಿ ಕರಿಯಪ್ಪ ಯಾದವ್, ಲತಾ ನಾಗರಾಜ ತಳವಾರ, ಹನುಮಂತ ವಾಲ್ಮೀಕಿ, ಬಾಬು ಉಪ್ಪಾರ, ಸಂತೋಷ ಸುರಪುರ ಇದ್ದರು.