ಪುರಸಭೆಯ ಸಿಬ್ಬಂದಿಗಳಿಗೆ ಔಷಧ ಕಿಟ್ ವಿತರಣೆ

ಮಳವಳ್ಳಿ: ಮೇ.21: ಮಂಡ್ಯ ಜಿಲ್ಲಾ ಆಯುಷ್ ಇಲಾಖೆ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಹಾಗೂ ಕಾಯಕ ಸಮಾಜಗಳ ಒಕ್ಕೂಟ ಮಂಡ್ಯ ಮಳವಳ್ಳಿ ಪುರಸಭೆ ಇವರ ಸಹಾಯದೊಂದಿಗೆ ಮಳವಳ್ಳಿ ಪೌರಕಾರ್ಮಿಕರಿಗೆ ಮತ್ತು ಪುರಸಭೆಯ ಸಿಬ್ಬಂದಿಗಳಿಗೆ ಉಚಿತವಾದ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧ ಕಿಟನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಪತ್ರಕರ್ತ ಎಂ.ಲೋಕೇಶ್ ಕೋವಿಡ್-19 ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಇದಕ್ಕೆ ಇನ್ನು ಯಾವುದೇ ನಿಖರವಾದ ಔಷಧಿ ದೊರಕದ ಕಾರಣ ಮಾನ್ಯ ಕೇಂದ್ರ ಸರ್ಕಾರ ನಿರ್ದೇಶನದಂತೆ ಆಯುಷ್ ಇಲಾಖೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧಿಯನ್ನು ಮಂಡ್ಯ ಜಿಲ್ಲಾದ್ಯಂತ ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಪುಷ್ಪ ರವರು ಸಂಘ ಸಂಸ್ಥೆಗಳ ಮುಖಾಂತರ ಎಲ್ಲ ಜನಸಾಮಾನ್ಯರಿಗೆ ಮತ್ತು ಇಲಾಖೆಯ ವಾರಿಯರ್ಸ್ ಗಳಿಗೆ ವಿತರಿಸಲಾಗುತ್ತಿದೆ.
ಆದ್ದರಿಂದ ಸಂಸಮಿನಿ ವಿಟ ಮಾತ್ರೆ ಮತ್ತು ಲಿಕ್ವಿಡ್ ಅಮೃತಬಳ್ಳಿ ಮಾತ್ರೆಯನ್ನು ತೆಗೆದುಕೊಂಡು ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಿ ಮತ್ತು ಅಡುಗೆಯಲ್ಲಿ ಚಕ್ಕೆ ಲವಂಗ ಬೆಳ್ಳುಳ್ಳಿ ಹರಿಶಿಣ ಹೆಚ್ಚು ಉಪಯೋಗಿಸಿ ಮತ್ತು ಬಿಸಿಯಾದ ಆಹಾರ ಬಿಸಿ ನೀರು ಸೇವಿಸಿ ಸರ್ಕಾರ ನೀಡುವ ಸೂಚನೆಯನ್ನ ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಪದೇಪದೇ ಮೂಗು ಕಣ್ಣು ಬಾಯಿ ಮುಟ್ಟಿಕೊಳ್ಳಬೇಡಿ ಸೋಪಿನಲ್ಲಿ ಕೈ ಚೆನ್ನಾಗಿ ತೊಳೆದುಕೊಂಡು ಎಂದು ಸಲಹೆ ನೀಡಿದರು.
ನಂತರ ಔಷಧಿ ಬಗ್ಗೆ ಬಂಡೂರು ಆಯುಷ್ ಅಧಿಕಾರಿ ಭಾಗ್ಯ ರವರು ಮಾತನಾಡಿ ಆರೋಗ್ಯ ವೃದ್ಧಿಸಿಕೊಳ್ಳಿ ಆಯುಷ್ ಔಷಧಿಯನ್ನು ಪ್ರತಿಯೊಬ್ಬರು ಸೇವಿಸಿ ಯಾರು ಅಸಡ್ಡೆ ಮಾಡಬಾರದು ಎಂದು ತಿಳಿಸಿದರು. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ದಿನನಿತ್ಯ ಬಿಸಿ ಆಹಾರ ಸೇವಿಸಿ ಎಂದು ತಿಳಿಸಿದರು ಔಷಧಿ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು.
ನಂತರ ಮಳವಳ್ಳಿ ವೃತ್ತ ನಿರೀಕ್ಷಕರಾದ ರಾಜೇಶ್ ಮಾತನಾಡಿ ಆಯುಷ್ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಮುಖಾಂತರ ನಮ್ಮ ಪೆÇಲೀಸ್ ವಾರಿಯರ್ಸ್ ಗಳಿಗೂ ವಿತರಿಸಲಾಗಿದೆ ನಾವು ತೆಗೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಪೌರಕಾರ್ಮಿಕರು ಸಹ ಯಾವುದೇ ರೀತಿ ಗೊಂದಲ ಇಲ್ಲದೆ ಆಯುಷ್ ಇಲಾಖೆಯ ಔಷಧಿಯನ್ನು ಸೇರಿಸಿ ಆರೋಗ್ಯ ವೃದ್ಧಿಸಿಕೊಂಡು ಕರ್ತವ್ಯ ಮಾಡಿ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಎಂದರು ನಂತರ ಪುರಸಭೆ ಮುಖ್ಯ ಅಧಿಕಾರಿ ಚಂದ್ರಶೇಖರ್ ಅವರು ಮಾತನಾಡಿ ಔಷಧಿ ಬಗ್ಗೆ ಮತ್ತು ಸಂಘ ಸಂಸ್ಥೆಗಳ ಬಗ್ಗೆ ಪ್ರಸಂಸೆ ಪಟ್ಟವರು ನಂತರ ಎಲ್ಲಾ ಪೌರಕಾರ್ಮಿಕರಿಗೆ ವಿತರಿಸಿದರು ಕಾರ್ಯಕ್ರಮದಲ್ಲಿ ಮುಖ್ಯ ಇಂಜಿನಿಯರ್ ಪುರುಷೋತ್ತಮ್ ಪುರಸಭಾ ಸದಸ್ಯ ರವಿ ಪುರಸಭೆಯ ಅಧಿಕಾರಿಗಳು ಪೌರಕಾರ್ಮಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಯಿತು ಮಳವಳ್ಳಿ ಪುರಸಭಾ ಅವರಣ ದಲ್ಲಿ ನಡೆಯಿತು.