ಪುರಸಭೆಯಿಂದ ತೆರಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ಹಗರಿಬೊಮ್ಮನಹಳ್ಳಿ.ಸೆ.26 ಪಟ್ಟಣದ ಪುರಸಭೆಯಿಂದ 14ನೇ ವಾರ್ಡ್ ನಲ್ಲಿ ಆಸ್ತಿ ಮತ್ತು ನೀರಿನ ತೆರಿಗೆ ಸಂಗ್ರಹಣೆಗೆ ಪುರಸಭೆ ಅಧಿಕಾರಿಗಳು ಗುರುವಾರ ಮನೆ ಬಾಗಿಲಿಗೆ ತೆರಳಿ ತೆರಿಗೆ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ ನೀಡಿದರು
 ಪುರಸಭೆಯ ಮುಖ್ಯಾಧಿಕಾರಿ ಎಂಕೆ ಮುಗಳಿ ಮಾತನಾಡಿ ತೆರಿಗೆ ಸಂಗ್ರಹದಿಂದ ಪುರಸಭೆ  ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸಾರ್ವಜನಿಕರು ಕೂಡ ಪುರಸಭೆಗೆ ಅಲಿಯುವುದು ತಪ್ಪಿದಂತಾಗುತ್ತದೆ. ತಿಂಗಳಲ್ಲಿ ಎರಡು ಮೂರು ಬಾರಿ ಈ ಅಭಿಯಾನ ನಡೆಯಲಿದೆ ಎಂದರು.
 ಪುರಸಭೆಯ ಕಂದಾಯ ನಿರೀಕ್ಷಕ ಮಾರಣ್ಣ ಮಾತನಾಡಿ ತೆರಿಗೆ ಅಭಿಯಾನದಲ್ಲಿ ಮನೆ ತೆರಿಗೆ 89 437 ರೂ. ನೀರಿನ ತೆರಿಗೆ 2.06 ಲಕ್ಷ ರೂ. ಸೇರಿ ಒಟ್ಟು 2.91 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಯಿತು. ಬಳಿಕ ನಡೆದ ಕೋವಿಡ್  ತಡೆಗೆ ಜಾಗೃತಿ ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ ಶಿವರಾಜ್ ಮಾತನಾಡಿದರು   ತಾಲೂಕಿನಲ್ಲಿ ಸಂಪೂರ್ಣ ಲಸಿಕೆ ಹಿನ್ನೆಲೆಯಲ್ಲಿ ಸೆಪ್ಟಂಬರ್ 17 ರಂದು ಕೋವಿಡ್  ತಡೆ ಲಸಿಕೆ ಮಹಾ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
  ಈ ಸಂದರ್ಭದ ವಸ್ತಾಪಕರಾದ ,ಟಿ.ಚಂದ್ರಶೇಖರ್, ಕಂ.ನಿರೀಕ್ಷಕರಾದ, ಸಾವಿತ್ರಮ್ಮ, ಓಬಣ್ಣ, ಮಾರುತಿ, ನೈ.ನಿರೀಕ್ಷಕರಾದ, ಜಯಲಕ್ಷ್ಮಿ,ನಾಗರತ್ನ ಹಾಗು ಕರ ವಸೂಲಿಗಾರರಾದ ಹನುಮಂತಪ್ಪ, ಚಂದ್ರು, ಗುಡದಯ್ಯ,ರಾಜಸಾಬ್ , ಐಟಿ ಸ್ಟ್ಯಾಫ್  ಶರೀಫ ಅಂಜುಮ್ ಪಟೀಲ್ ಉಪಸ್ತಿತರಿದ್ದರು,