ಪುರಸಭೆಯಲ್ಲಿ ಸಿಸಿ ಕ್ಯಾಮೆರಾ ಮಾಯಾ!

ಅಧಿಕಾರಿಗಳ ಆಟಕ್ಕೆ ಸಾರ್ವಜನಿಕರ ಆಕ್ರೋಶ
ದುರುಗಪ್ಪ ಹೊಸಮನಿ
ಲಿಂಗಸುಗೂರು.ಮಾ.೨೮-೨೮ಲಿಂಗಸುಗೂರು ಪುರಸಭೆ ಕಾರ್ಯಾಲಯದಲ್ಲಿ ಕಳೆದ ಕೇಲವು ದಿನಗಳಿಂದ ಪುರಸಭೆ ಕಾರ್ಯಾಲಯದಲ್ಲಿ ಅಳವಡಿಸಿದ ಸಿಸಿ ಟಿವಿ ಕ್ಯಾಮೆರಾ ಕಛೇರಿಯಲ್ಲಿ ಮಾಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಆಟೋಟಪಕ್ಕೆ ಸಾರ್ವಜನಿಕ ಜೀವನದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳು ಚೆಲ್ಲಾಟ ವಾಡುತಿದ್ಧಾರೆ. ಕಛೇರಿಯಲ್ಲಿ ಈಗಾಗಲೇ ಈ ಹಿಂದೆ ಇದ್ದ ಅಂದಿನ ಅಧಿಕಾರಿಗಳು ಕಛೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದರು, ಆದರೆ ಇಂದಿನ ಅಧಿಕಾರಿಗಳು ಕಛೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಮಾಯವಾಗಿದೆ ಇದರಿಂದ ಗೊತ್ತಾಗೋದು ತಮ್ಮ ಕಮೀಷನ್ ದಂಧೆಗೆ ತೊಂದರೆಯಾಗುತ್ತಿದೆ ಎಂದು ಕಛೇರಿಯಲ್ಲಿ ಅಳವಡಿಸಿದ ಸಿಸಿ ಟಿವಿ ಕ್ಯಾಮೆರಾ ಬಂದಮಾಡುವ ಮೂಲಕ ಆಡಳಿತ ವ್ಯವಸ್ಥೆ ಎಷ್ಟು ಕಠೊರವಾಗಿದೆ ಎಂದು ಇದರಿಂದ ಸಂಪೂರ್ಣವಾಗಿ ಸಾರ್ವಜನಿಕರಿಗೆ ತಿಳಿಯುತ್ತದೆ.
ಪುರಸಭೆ ಕಛೇರಿಯಲ್ಲಿ ಖಾತಾ ನಕಲು ಬದಲಾವಣೆ ಮಾಡಲು ಹಾಗೂ ಮುಟೆಷನಗೆ ಅರ್ಜಿ ಹಾಕಿದ ಜನರು ಪುರಸಭೆ ಅಧಿಕಾರಿಗಳನ್ನು ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಖಾತ ನಕಲು
ವರ್ಗಾವಣೆ ಮಾಡಲು ೩,೪, ತಿಂಗಳು ಬೇಕಾಗುತ್ತದೆ ಎಂದು ಪುರಸಭೆ ಅಧಿಕಾರಿಗಳು ಅರಿಕೆ ಉತ್ತರ ನಿಡುತ್ತಿದ್ದಾರೆ. ಎಂದು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಖಾತ ನಕಲು ಮುಟೇಷನ್‌ಗೆ ಅರ್ಜಿ ಹಾಕಿದ ಫಲಾನುಭವಿಗಳು ದಿನ ಬೆಳಗಾದರೆ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ನೊಂದ ಮಹಿಳೆಯರು ಸೇರಿ ಅರ್ಜಿದಾರರು ಮುಖ್ಯಾಧಿಕಾರಿ ವಿರುದ್ಧ ಕಿಡಿಕಾರಿದರು ಒಟ್ಟಿನಲ್ಲಿ ಹೇಳುವುದಾದರೆ ಪುರಸಭೆ ಕಾರ್ಯಾಲಯ ಗೊಂದಲದ ಗೂಡಾಗಿದೆ ಮತ್ತು ಒಂದು ಕಡೆ ಮುಖ್ಯಾಧಿಕಾರಿಗಳು ಆಡಿದ್ದ ಆಟ
ಮತ್ತೋಂದು ಕಡೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ನೋಟ ಹಾಗೂ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಹಾಗೂ ಅಧ್ಯಕ್ಷೀಯಾದ ಗದ್ದೆಮ್ಮಯಮನೂರ ಬೋವಿ ಮತ್ತು ಉಪಾಧ್ಯಕ್ಷ ಎಂಡಿ ರಫೀ ಈ ಮೂವರ ತಿಕ್ಕಾಟದಲ್ಲಿ ಸದಸ್ಯರು
ಭೆಸತ್ತು ತಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡದೆ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.
ಇದರಿಂದ ಸಾರ್ವಜನಿಕರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸದಸ್ಯರು ಆಡಳಿತ ವ್ಯವಸ್ಥೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ಎನ್ನಲಾಗಿದೆ ಪ್ರಮುಖವಾಗಿ ಪುರಸಭೆ ಕಛೇರಿಯಲ್ಲಿ ನಡೆಯುತ್ತಿರುವ ಆಟಕ್ಕೆ ಮೂಗೂದಾರ ಹಾಕುವುದು ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣವೆಂದರೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳ ಸದಸ್ಯರ ಆಂತರಿಕ ಕಲಹಗಳು ಕಾರಣವಾಗಿದೆ. ಈ ಆಂತರಿಕ ಕಲಹಗಳು ಸೂಕ್ಷ್ಮವಾಗಿ ಗಮನಿಸಿದ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಅಧ್ಯಕ್ಷೆ ಗದ್ಧೆಮ್ಮ ಯಮನುರ ಬೋವಿ ಹಾಗೂ ಉಪಾಧ್ಯಕ್ಷ ಎಂಡಿ ರಫೀ ಸದಸ್ಯರು ಲಾಭ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ ಪುರಸಭೆ ಕಛೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಇದ್ದರು.
ಯಾವುದೇ ಪ್ರಯೋಜನವಾಗಿಲ್ಲ ಏಕೆಂದರೆ ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ನೀಗಾವಹಿಸುತ್ತದೆ ಎಂದು ಅರಿತಿದ್ದ ಅಧಿಕಾರಿಗಳು ತಮ್ಮ ಕಮೀಷನ್ ದಂಧೆಗೆ ತೊಂದರೆಯಾಗುತ್ತಿದೆ ಎಂದು ಪುರಸಭೆ ಕಛೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಕಛೇರಿಯಲ್ಲಿ ಸುಮಾರು ೭ರಿಂದ ೮ಸಿಸಿ ಟೀವಿ ಬಂದು ಮಾಡಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ.
ಸರ್ಕಾರದ ನಿಯಮ ಪ್ರಕಾರ ಪ್ರತಿಯೊಂದು ಇಲಾಖೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ
ಮಾಡಲು ಆದೇಶ ಹೊರಡಿಸಿದೆ ಆದರೆ ಇಲ್ಲಿ ಮಾತ್ರ ಪುರಸಭೆ ಕಛೇರಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಹೆಸರಿಗೆ ಮಾತ್ರ ಸಾಧ್ಯ ವಾಗಿದೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಬಂದಾಗಿನಿಂದ ಪುರಸಭೆ ಕಛೇರಿಯಲ್ಲಿ ಒಂದಿಲ್ಲೊಂದು ಸಮಸ್ಯೆಗಳ ಕೆಂದ್ರವಾಗುತ್ತದೆ ಕೂಡಲೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಲಿಂಗಸುಗೂರು ಪುರಸಭೆಗೆ ಭೇಟಿ ನೀಡಿ ಅಲ್ಲಿನ ಕಡತಗಳನ್ನು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದಿದ್ದರೆ, ಲಿಂಗಸಗೂರ ಪುರಸಭೆ ಯನ್ನು ಸೂಪರ್ ಸೀಡ್ ಮಾಡಿ ಇದು ಸಾರ್ವಜನಿಕರ ಅಭಿಪ್ರಾಯ ಪಟ್ಟಿದ್ದಾರೆ. ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡ್‌ಗಳಲ್ಲೂ ಅಬಿರುದ್ಧಿ ಮರಿಚಿಕೆಯಾಗಿದೆ ಆಡಳಿತ ಮಂಡಳಿಯ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಆಡಳಿತ ಮಂಡಳಿಯ ಸದಸ್ಯರ ಜೊತೆ ಜೊತೆಗೆ ಸಹಕಾರ ನೀಡಬೇಕು ಇಲ್ಲದಿದ್ದರೆ, ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆಯಾಗುತ್ತದೆ ಕೂಡಲೇ ಪುರಸಭೆ ಅಧಿಕಾರಿಗಳು ಅಭಿವೃದ್ಧಿಗೆ ಒತ್ತು ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಇಲ್ಲವೊ ಕಾದು ನೋಡಬೇಕಿದೆ ಸಮಾಜ ಸೇವಕ
ಜಾಫರ್ ಸಾಬ್ ಫೂಲ್ ವಾಲೆ, ಹಾಗೂ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮ್ಮೈಭೂಬಪಾಶ ಇವರು ಆಗ್ರಹಿಸಿದ್ದಾರೆ.