ಪುರಸಭೆಯಲ್ಲಿನ ಅವ್ಯವಹಾರ ತನಿಖೆಗೆ ಆಗ್ರಹಿಸಿ ಮನವಿ

ಮುದ್ದೇಬಿಹಾಳ:ಮಾ.20: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ 2015 ರಿಂದ 2021ರ ವರೆಗೆ ಸಾಕಷ್ಟು ಅವ್ಯವಹಾರ ನಡೆದಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಬೇಕೆಂದು ಆಹ್ರಹಿಸಿ ಪುರಸಭೆ ಸದಸ್ಯರು ಹಾಗೂ ಯುವ ಮುಖಂಡರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿ ಪುರಸಭೆಗೆ ಸಂದಾಯವಾಗಬೇಕಾಗಿದ್ದ ಹಣದಲ್ಲಿ ಬಾರಿ ಗೋಲಮಾಲ ಮಾಡಿರುವ ಕಂದಾಯ ನೀರಕ್ಷ ಅಧಿಕಾರಿ ಅವರು ಹಣ ಲೂಟಿ ಹೊಡೆದಿದ್ದಾರೆ.ಸಿಟಿಎಸ್ ನಂ 2117..ಈ ಆಸ್ತಿಯೂ ಜ್ಞಾನ ಗಂಗೋತ್ರಿ ವಿದ್ಯಾಮಂದಿರಕ್ಕೆ ಬಳಕೆಯಾಗುತ್ತಿದೆ ಪುರಸಭೆ 2,91,977 ಲಕ್ಷ ಹಣವು ಸಂದಾಯವಾಗಿಬೇಕಿತ್ತು ಆದರೇ ಮನೆ ಅಂತಾ ಉತಾರದಲ್ಲಿ ದಾಖಲಿಸಿ ಕೇವಲ 47000 ಸಾವಿರ ಸಂದಾಯ ಮಾಡಿಸಿಕೊಂಡಿದ್ದಾರೆ, ಇದೇ ರೀತಿ ಸರ್ವೇ ನಂ 58 ಇಂದಿರಾ ನಗರದಚಿನಿವಾರ ಲೇಔಟ್ ಸಂಗಮೇಶ ಸವೇ ನಂ ಮದರಿ ಕಾಂಪ್ಲೇಕ್ಸ್ ಮಳಿಗೆಗಳು ಸಧ್ಯ ಕಟ್ಟಡ ಮಾಡಲಾಗಿದೇ ಆದರೇ ಇ ಜಾಗೆಗಳೇಲ್ಲವೂ ಗೂಮಟಾ ಪ್ಲಾಟುಗಳಾಗಿದ್ದು ನಿಮಾನುಸಾರ ಸರಕಾರದ ಯಾವ ಮೂಲಬೂತ ಸೌಲಭ್ಯಗಳು ನೀಡಲು ಪುರಸಭೆ ವತಿಯಿಂದ ಕಟ್ಟಡ ಪರವಾನಿ ನೀಡಲು ಬರುವುದಿಲ್ಲ ಕಾರಣ ಈವುಗಳಿಗೆ ಕಟ್ಟಡದ ಪರವಾನಿಗೆ ನೀಡಿದ್ದಲ್ಲದೇ ಎನ್ ಓ ಸಿ ನೀಡಿರುತ್ತಾರೆ,
ಅಲ್ಲದೇ ಗುಂಟಾ ಜಾಗಗಳಿದ್ದರೂ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಪುರಸಭೆಯಲ್ಲಿ ನೊಂದಣಿ ಮಾಡಿ ಕಟ್ಟಡ ಪರವಾಣಿಗೆ ನೀಡಿರುತ್ತಾರೆ. ಅಲ್ಲದೇ ಸರಕಾರದ ನಿಯಮಾನುಸಾರ ಆಸ್ತಿಯ ಉತಾರೆ ನಿಡದೇ ಇನ್ನೂ ಅಭಿವೃದ್ಧಿ ಪಡಿಸದ ಆಸ್ತಿಗಳನ್ನು ಹೆಸರು ದಾಖಲಿಸಿಕೊಂಡು ಉತಾರೆಯನ್ನು ನೀಡಿರುತ್ತಾರೆ. ಇದರ ಬಗ್ಗೆ ಪುರಸಭೆ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನಿಸಿದರೆ ನೀವು ಬೇಕಾದರೆ ನಮ್ಮ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ತಮ್ಮ ಅವ್ಯವಹಾರ ಮರೆಮಾಚಿ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಾರೆ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.
ಪಟ್ಟಣದ ಪುರಸಭೆಯಲ್ಲಿ ಕಳೆದ 3 ವರ್ಷಗಳಕ್ಕಿಂತಲೂ ಹೆಚ್ಚಿನ ಅವಧಿಯಾದರೂ ಸ್ಥಳೀಯ ಹಣ ಬಲ ಮತ್ತು ರಾಜಕೀಯ ಬೆಂಬಲವನ್ನು ಪಡೆದು ಕಂದಾಯ ನಿರೀಕ್ಷಕರು ಇದೇ ಪುರಸಭೆಯಲ್ಲಿ ಸರಕಾರದ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ ಹಣ ಮತ್ತು ರಾಜಕೀಯ ಬಲ ತೋರಿಸುತ್ತಿರುವ ಕಂದಾಯ ಅಧಿಕಾರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ದೂರಿದ್ದಾರೆ.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಯಲ್ಲಪ್ಪ ನಾಯಕಮಕ್ಕಳ, ರೀಯಾಜ ಢವಳಗಿ, ಆರ್.ಬಿ.ದ್ರಾಕ್ಷಿ, ಅಬ್ದುಲ್‍ಮಜೀದ ಮಕಾನದಾರ ಮತ್ತಿತರರು ಇದ್ದರು.