ಪುರಸಭೆಗೆ ಐವರು ನಾಮ ನಿರ್ದೇಶಕ ಸದಸ್ಯರ ನೇಮಕ

ಕುಣಿಗಲ್, ಏ. ೩- ಇಲ್ಲಿನ ಪುರಸಭೆಗೆ ಐದು ಮಂದಿ ನಾಮ ನಿರ್ದೇಶಕ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕುಣಿಗಲ್ ಪುರಸಭೆಗೆ ಐದು ಜನ ಊರಿನ ಪ್ರಮುಖರು ಬಿಜೆಪಿ ಪಕ್ಷದ ಕಾರ್ಯಕರ್ತರು ಆದಂತಹ ವೆಂಕಟೇಶ್ ಎಸ್ ಉಪ್ಪಾರ ಬೀದಿ, ಶಿವಕುಮಾರ ಸಿದ್ದಾರ್ಥನಗರ. ಗೋಪಿಕೋಟೆ, ಗೌರಮ್ಮ ಕೆಎಸ್‌ಆರ್ ಅಗ್ರಹಾರ, ಹಾಗೂ ನಾಗೇಶ್ ದೊಡ್ಡಪೇಟೆ ಇವರುಗಳನ್ನು ನಾಮನಿರ್ದೇಶನ ಮಾಡಿ ಸರ್ಕಾರ ನೇಮಕ ಮಾಡಿದೆ.
ಈ ಸಂದರ್ಭದಲ್ಲಿ ನೂತನ ಪುರಸಭೆ ನಾಮನಿರ್ದೇಶಕ ಸದಸ್ಯರಾಗಿ ನೇಮಕಗೊಂಡಿರುವ ಬಿ.ಆರ್. ನಾಗೇಶ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಚುನಾಯಿತ ಸದಸ್ಯರ ಸಹಕಾರದೊಂದಿಗೆ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಪಟ್ಟಣದ ಏಳ್ಗೆಗಾಗಿ ಶ್ರಮಿಸುವುದರ ಜತೆಯಲ್ಲಿ ಪಟ್ಟಣವನ್ನು ಸುಂದರವಾಗಿ ಸ್ಮಾರ್ಟ್‌ಸಿಟಿ ವಿಧದಲ್ಲಿ ಅಭಿವೃದ್ಧಿಪಡಿಸುವ ಆಕಾಂಕ್ಷೆ ಹೊಂದಿದ್ದು, ಊರಿನಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಅತಿ ಜರೂರಾಗಿ ಆಗಬೇಕಾಗಿದ್ದು ದೊಡ್ಡಪೇಟೆ ರಸ್ತೆಗೆ ಅಭಿವೃದ್ಧಿಪಡಿಸಬೇಕಾಗಿದೆ. ಈ ವ್ಯಾಪ್ತಿಗೆ ಐದು ಜನ ಸದಸ್ಯರು ಬರುತ್ತಾರೆ. ಅವರ ಸಹಕಾರದೊಂದಿಗೆ ರಸ್ತೆ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು ಎಂದರು.
ಈ ಹಿಂದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷರಾಗಿ, ವಾಸವಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಸ್ಕೋ ಸ್ಯಾನಿಟರಿ ಫ್ರೀ ಶೀಟ್ ಜತೆಗೆ ನಿರಾಶ್ರಿತರಿಗೆ ಊಟದ ವ್ಯವಸ್ಥೆಯನ್ನು ಕೈಗೊಂಡು ಸಾಮಾಜಿಕ ಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿಜೆಪಿ ಪಕ್ಷದ ನಾಯಕರಾದ ಡಿ.ಕೃಷ್ಣಕುಮಾರ್, ಬಲರಾಮ್ ಹಾಗೂ ಎ. ಸಂತೋಷ್ ಇವರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಸೇರಿದಂತೆ ಉತ್ತಮ ಕಾರ್ಯ ಕೈಗೊಂಡು ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.