ಪುರವರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

ಮಧುಗಿರಿ, ಸೆ. ೨೨- ತಾಲ್ಲೂಕಿನ ಪುರವರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ತಿಮ್ಮಪ್ಪ ಹಾಗೂ ಉಪಾಧ್ಯಕ್ಷರಾಗಿ ನಾಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೆರವಾಗಿದ್ದ ಸ್ಥಾನಕ್ಕೆ ನಿಗದಿಯಂತೆ ಪುರವರ ಗ್ರಾಮದ ಡೇರಿಯಲ್ಲಿ ನಡೆದ ಚುನಾವಣೆಯಲ್ಲಿ ತಿಮ್ಮಪ್ಪ, ನಾಗಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮೋಹನ್‌ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡೇರಿ ಕಾರ್ಯದರ್ಶಿ ಕೆ. ರಂಗನಾಥ್, ನಿರ್ದೇಶಕರಾದ ಪಿ.ಡಿ. ಕೃಷ್ಣಪ್ಪ, ಅಗರಪ್ಪ, ಎಚ್. ಹನುಮಂತರಾಯಪ್ಪ, ಎಸ್. ಗಂಗಾಧರಯ್ಯ, ತಿಪ್ಪೇತಿಮ್ಮಯ್ಯ, ವರಲಕ್ಷ್ಮಮ್ಮ, ವಿಜತಲಕ್ಷ್ಮೀ, ಗೌರಮ್ಮ, ಹನುಮಕ್ಕ, ಮುಖಂಡರಾದ ಪಿ.ಎಲ್. ನರಸಿಂಹಮೂರ್ತಿ, ಪಿ.ಕೆ. ರಂಗಸ್ವಾಮಿ, ಮುದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.