ಪುರವಂತರಿಗೆ ಸರ್ಕಾರದಿಂದ ಮಾಶಾಸನ ಮಂಜೂರು ಮಾಡಲಿ

ಕಲಬುರಗಿ.ಅ.31: ಪಂಚಪೀಠಗಳಲ್ಲಿ ಒಂದಾದ ಶ್ರೀಮದ್‍ರಂಭಾಪುರಿ ಪೀಠದ ಗೋತ್ರ ಪುರುಷನಾದ ಶ್ರೀ ವೀರಭದ್ರಸ್ವಾಮಿಯು ಸಾವಿರಾರು ವರ್ಷಗಳಿಂದ ಅವರ ಹೆಸರಿನಮೇಲೆ ಪುರವಂತರು ವೀರಗಾಸೆ ನೃತ್ಯ ಸಂಸ್ಕøತಿ, ಕಲೆ ವೀರಭದ್ರನ ವಡಪುಗಳು ಹೇಳುತ್ತಾ ವೀರಭದ್ರನ ಅನುಯಾಯಿಗಳಾದ ಪುರವಂತರಿಗೆ ಸರ್ಕಾರದಿಂದ ಮಾಶಾಸನ ಮಂಜೂರು ಮಾಡಿ ಕಲೆ, ಸಂಸ್ಕøತಿಯನ್ನು ಪರಂಪರೆಯನ್ನು ರಕ್ಷಿಸಬೇಕೆಂದು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ಸರ್ಕಾರಕ್ಕೆ ತಿಳಿಸಿದ್ದಾರೆ.