ಪುನೀತ ರಾಜಕುಮಾರ ಸಮಾಜಮುಖಿ ಕಾರ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ


ಹುಬ್ಬಳ್ಳಿ, ನ2: ಕನ್ನಡ ಮೇರು ನಟರಾದ ರಾಜಕುಮಾರ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಚಿತ್ರರಂಗಕ್ಕೆ ಮಾದರಿಯಾಗಿದ್ದ ಕನ್ನಡದ ಕಂದ ಪುನೀತ ರಾಜಕುಮಾರ ಅವರ ಸಮಾಜಮುಖಿ ಕಾರ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಎಸ್.ಲೋಕ ಆಚರಿಸಿರುವುದು ಹೃದಯ ಹತ್ತಿರವಾದ ಕಾರ್ಯಕ್ರಮ ಎಂದು ಸಾಹಿತಿ ಮಾರ್ತಾಂಡಪ್ಪ ಎಮ್ ಕತ್ತಿ ಹೇಳಿದರು.
ಅವರು ಸಾಂಸ್ಕೃತಿಕ ಲೋಕ ಕಲ್ಚರಲ್ ಅಕಾಡೆಮಿಯು ಕೋರ್ಟ ಸರ್ಕಲ್ ಹತ್ತಿರದ ಡ್ಯಾನ್ಸ್ ಕ್ಲಾಸ್‍ನಲ್ಲಿ ಹಮ್ಮಿಕೊಂಡ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡಕ್ಕೆ ತನ್ನದೇ ಆದ ಸತ್ವ ಇದೆ.ಅದರಲ್ಲಿ ಹೃದಯವೈಶಾಲ್ಯತೆ ಇದೆ. ಗಟ್ಟಿಧ್ವನಿಯ ಶಕ್ತಿ ಅಡಗಿದೆ. ಅದನ್ನು ಎಲ್ಲರೂ ಉಳಿಸಿ ಬೆಳಸಿಕೊಂಡು ಹೋಗುವ ಮೂಲಕ ನಿರಂತರ ಭಾಷೆಯಾಗಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರುದ್ರೇಶ ಹಳವದ ಮಾತನಾಡಿ ಪುನೀತ ಅವರ ಆದರ್ಶಗಳನ್ನು ಜನರಿಗೆ ತಲುಪಿಸುವ ಈ ಕಾರ್ಯ ಉತ್ತಮವಾದದ್ದು. ಅಲ್ಲದೆ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಅವರನ್ನು ಸ್ಮರಿಸಿದ ಈ ಕಾರ್ಯಕ್ರಮ ಮಾದರಿಯಾದದ್ದು ಎಂದು ಹೇಳಿದರು.
ಸಾಂಸ್ಕೃತಿಕ ಲೋಕದ ಸೈಯದ ಎ ಎಮ್, ಹಿರಿಯ ಪತ್ರಕರ್ತರಾದ ಬಸವರಾಜ ಆನೇಗುಂದಿ ಮಾತನಾಡಿದರು. ಸುನೀಲ ಅರಳಿಕಟ್ಟಿ, ನಿರೂಪಿಸಿ, ವಂದಿಸಿದರು, ಎಸ್.ಲೋಕದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ದ್ಯಾಮ ಪಾಟೀಲ, ಗೌರೀಶ ನಧಾಫ್, ರಮೇಶ ಸಂಗಪ್ಪನವರ,ಪ್ರೀತಿ ಗೌಡರ, ಖುಷಿ. ಮಹೇಶ ಮಂಟನೂರ ಮುಂತಾದವರು.