ಪುನೀತ ರಾಜಕುಮಾರ ಅವರ ನಿಧನಕ್ಕೆ ಇಂಡಿ ಪಟ್ಟಣದಲ್ಲಿ ಅಭಿಮಾನಿಗಳು ಶ್ರದ್ದಾಂಜಲಿ ಸಭೆ

(ಸಂಜೆವಾಣಿ ವಾರ್ತೆ)
ಇಂಡಿ :ಅ.31:ಕನ್ನಡ ಚಿತ್ರರಂಗದ ಪವರ ಸ್ಟಾರ್ ಪುನೀತ ರಾಜಕುಮಾರ ಅವರು ಅಕಾಲಿಕ ನಿಧನ ಹೊಂದಿರುವ ನಿಮಿತ್ಯ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಭಿಮಾನಿಗಳು ಹಾಗೂ ಇಂಡಿ ತಾಲೂಕಿನ ಸಮಸ್ತ ನಾಗರಿಕರ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಿ,ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಅವರ ಆತ್ಮಕ್ಕೆ ಶಾಂತಿ ಕೊರಿ ಒಂದು ನಿಮಿಷ ಮೌನಾಚರಣೆ ನಡೆಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಅನೀಲ ಜಮಾದಾರ,ದೇವೆಂದ್ರ ಕುಂಬಾರ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅವಿನಾಶ ಬಗಲಿ,ಧರ್ಮು ವಾಲಿಕಾರ,ಅನೀಲಗೌಡ ಬಿರಾದಾರ,ಪುನೀತ ರಾಜಕುಮಾರ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ. ಕನ್ನಡ ಚಿತ್ರರಂಗಕ್ಕೆ ಅಷ್ಟೆ ಅಲ್ಲದೆ,ನಾಡಿಗೆ ನಷ್ಟವಾಗಿದೆ.ಚಿತ್ರರಂಗದಲ್ಲಿ ಧೃವತಾರೆಯಂತೆ ಇದ್ದಿರುವ ಅವರು, ಕೇವಲ ಚಿತ್ರರಂಗಕ್ಕೆ ಸಿಮೀತವಾಗಿರದೆ, ಸಮಾಜ ಸೇವೆಯಲ್ಲಿಯೂ ತೆರೆಮರೆಯ ಕಾಯಿಂತೆ ಕೆಲಸ ಮಾಡಿ,ಹಲವು ಕುಟುಂಬಗಳಿಗೆ ಆಶ್ರಯದಾತನಾಗಿದ್ದರು.ಚಿತ್ರರಂಗದ ಮೂಲಕ ಎಷ್ಟೆ ಎತ್ತರಕ್ಕೆ ಬೆಳೆದರು ಪ್ರತಿಯೊಬ್ಬರ ಜತೆ ಹಸನ್ಮೂಕಿಯಾಗಿ ಬೆರೆಯುವ ವ್ಯಕ್ತಿಯಾಗಿದ್ದರು. ನಾಡು,ನುಡಿ ವಿಷಯದಲ್ಲಿ ಅನೇಕ ಸಲಹೆ,ಸೂಚನೆಗಳನ್ನು ನೀಡುತ್ತಿದ್ದು, ತಂದೆಯ ಮಾರ್ಗದಲ್ಲಿ ನಡೆದು ಕನ್ನಡ ನಾಡು,ನುಡಿ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಅವರ ಅಗಲಿಕೆ ಕನ್ನಡನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ನೀಡಲಿ,ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು.
ಜಟ್ಟೆಪ್ಪ ರವಳಿ, ಭೀಮನಗೌಡ ಪಾಟೀಲ, ಬುದ್ದುಗೌಡ ಪಾಟೀಲ,ಮಹೇಶ ಹೊನ್ನಬಿಂದಗಿ, ಸಿದ್ದು ಬೆಲ್ಯಾಳ,ಸೋಮಶೆಖರ ದೇವರ, ಇಲಿಯಾಸ ಬೊರಾಮಣಿ,ಹುಚ್ಚಪ್ಪ ತಳವಾರ, ರಾಜು ಕುಲಕರ್ಣಿ,ಜಹಾಂಗಿರ ಸೌದಾಗರ, ಶ್ರೀಶೈಲ ಪೂಜಾರಿ,ಯಮುನಾಜಿ ಸಾಳುಂಕೆ, ಸಂಜೀವ ಪವಾರ,ಸುನೀಲಗೌಡ ಬಿರಾದಾರ, ಉಮೇಶ ದೇಗಿನಾಳ,ಶಿವು ಬಿಸನಾಳ,ಸುದೀರ ಕರಕಟ್ಟಿ ಸೇರಿದಂತೆ ಅಭಿಮಾನಿಗಳು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.