
ಸಿಂಧನೂರು,ಮಾ.೧೫- ಡಾ.ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಮೆರವಣಿಗೆ ಯಲ್ಲಿ ನಡೆದ ಗಲಾಟೆ ಸಂಬಂಧ ಹಲವರ ವಿರುದ್ಧ ನಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್‌ಐ ಮಣಿಕಂಠ ವಿರುದ್ಧ ಇಲಾಖೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.
ನಗರದ ನೂತನ ರಂಗಮಂದಿರದ ಮುಂದೆ ಡಾ.ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣ ಮಾಡಲು ಡಾ.ಪುನೀತ್ ರಾಜಕುಮಾರ್ ಪ್ರತಿಮೆಯನ್ನು ನಗರದ ಗಣೇಶ ಗುಡಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ತೆಗೆದುಕೊಂಡು ಹೊರಟಾಗ ರಂಗಮಂದಿರಕ್ಕೆ ಪುತ್ಥಳಿ ತೆಗೆದುಕೊಂಡು. ಹೋಗಲು ಪೋಲಿಸರು ನಿರಾಕರಿಸಿದರಿಂದ ಪೋಲಿಸರು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಮದ್ಯ ಗಲಾಟೆ ನಡೆಯಿತು.
ಕುರುಬ ಸಮಾಜದ ಪಿಎಸ್‌ಐ ಮಣಿಕಂಠ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುದ್ದಿ ಹರಡಿ ಕುರುಬ ಸಮಾಜದ ನೂರಾರು ಜನರು ಕನಕದಾಸ ವೃತ್ತದಲ್ಲಿ ಜಮಾಯಿಸಿ ಶಾಸಕ ವೆಂಟರಾವ ನಾಡಗೌಡ ಮಗನ ವಿರುದ್ಧ ಕ್ರಮಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅದೆ ದಾರಿ ಮದ್ಯ ಹೊರಟ ಶಾಸಕ ವೆಂಟರಾವ ನಾಡಗೌಡ ಸೋದರ ಬಸವರಾಜ ನಾಡಗೌಡರ ಕಾರು ತಡೆದು ಕಾರಿಗೆ ಕಟ್ಟಿದ ಜೆಡಿಎಸ್ ಪಕ್ಷದ ಧ್ವಜ ಕಿತ್ತು ಹಾಕಿ ಗ್ಲಾಸ್ ಒಡೆದು ಅವರ ಮೇಲೆ ಹಲ್ಲೆಗೆ ಮುಂದಾದಾಗ ಪೋಲಿಸರು ಬಂದು ಆಗುವ ಅನಾಹುತವನ್ನು ತಪ್ಪಿಸಿದರು.
ಬಸವರಾಜ ನಾಡಗೌಡ ತಮ್ಮ ಬೆಂಬಲಿಗರ ಜೊತೆ ನಗರ ಠಾಣೆಯಲ್ಲಿ ಪ್ರತಿಭಟನೆ ನಡೆಸಿದಾಗ ಅಪ್ಪು ಅಭಿಮಾನಿಗಳು ಸಹ ನಾಡಗೌಡರಿಗೆ ಬೆಂಬಲ ಸೂಚಿಸಿದರು. ಕನಕದಾಸ ವೃತ್ತದಲ್ಲಿದ್ದ ಜನರು ಅಭಿಶೇಷ ನಾಡಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಠಾಣೆಯ ಒಳಗಡೆ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರೆ, ಠಾಣೆಯ ಹೊರಗಡೆ ಕುರುಬ ಸಮಾಜದ ಮುಖಂಡರಾದ ಕೆ. ಕರಿಯಪ್ಪ ದೊಡ್ಡ ಬಸವರಾಜ ಹನಮೇಶ ಬಾಗೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಪೊಲೀಸರಿಗೆ ಎನೂ ಮಾಡಬೇಕು ತಿಳಿಯದಂತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿ ಆಗುವ ಅನಾಹುತವನ್ನು ತಪ್ಪಿಸಿದರು.
ಸಂಜೆ ಶಾಸಕ ವೆಂಟರಾವ ನಾಡಗೌಡ ಬಸವರಾಜ ನಾಡಗೌಡ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನಿಖೀಲ್ ಬಿ. ಹೆಚ್ಚುವರಿ ಎಸ್.ಪಿ ಶಿವಕುಮಾರ ಡಿವೈಎಸ್‌ಪಿ ವೆಂಕಟಪ್ಪ ನಾಯಕ ನಗರ ಠಾಣೆಯಲ್ಲಿ ಸಭೆ ನಡೆಸಿ ನಡೆದ ಗಲಾಟೆ ಬಗ್ಗೆ ಚರ್ಚಿಸಿದರು. ಅಕ್ರಮ ಕೂಟ ಕಟ್ಟಿಕೊಂಡು ಬಂದು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಅಭಿಶೇಷ ನಾಡಗೌಡ ಸೇರಿದಂತೆ ಸುಮಾರು ೨೪ ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್‌ಐ ಮಣಿಕಂಠ ವಿರುದ್ಧ ಇಲಾಖೆ ವತಿಯಿಂದ ವಿಚಾರಣೆ ನಡೆಸಲಾಗುವುದು ಎಂದು ಎಸ್‌ಪಿ ನಿಖೀಲ್ ಬಿ. ಪತ್ರಿಕೆಗೆ ಮಾಹಿತಿ ನೀಡಿದರು.