ಪುನೀತ್ ಸ್ಮರಣೆ ಜಾಥಾ

ಆನೇಕಲ್, ನ. ೧೪: ದೇವರ ಚಿಕ್ಕನಹಳ್ಳಿ ಸರ್ಕಲ್‌ನಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ೬೬ ನೇ ಕನ್ನಡ ರಾಜ್ಯೋತ್ಸವ ಮತ್ತು ರಕ್ತದಾನ ಶಿಭಿರ, ನಟ ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ಮತ್ತು ಆಟೋ ಮತ್ತು ಕಾರ್ ಮತ್ತು ಬೈಕ್ ಜಾಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿ.ಬಿ.ಎಂ.ಪಿ. ಮಾಜಿ ಉಪ ಮೇಯರ್ ರಾಮ್ ಮೋಹನ್ ರಾಜ್ ಜಯಕರ್ನಾಟಕ ಸಂಘನೆಯ ಬೆಂಗಳೂರು ನಗರ ಜಿಲ್ಲೆಯ ಕಾರ್ಯಾಧ್ಯಕ್ಷ ಯೋಗಾನಂದ್, ಉಪಾಧ್ಯಕ್ಷ ಶ್ರೀನಿವಾಸ್, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಸುಮಂತ್, ಕೂನೂನು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಜಿ.ಚಂದ್ರೇಗೌಡ, ದೇವರ ಚಿಕ್ಕನಹಳ್ಳಿ ಘಟಕದ ಅಧ್ಯಕ್ಷ ಮುನಿರಾಜು, ಸಮಾಜ ಸೇವಕ ಜಗದೀಶ್, ಶಿವಪ್ಪ, ಬಿಜೆಪಿ ಮುಖಂಡರಾದ ಮದುಸೂದನ್ ರೆಡ್ಡಿ, ಪ್ರವೀಣ್ ರೆಡ್ಡಿ, ಮುಕುಂದರೆಡ್ಡಿ, ನವೀನ್ ಮತ್ತು ಜಯಕರ್ನಾಟಕ ಸಂಘಟನೆಯ ಪದಾದಿಕಾರಿಗಳು ಭಾಗವಹಿಸಿದ್ದರು.