ಪುನೀತ್ ಸ್ಮರಣಾರ್ಥ ರಕ್ತದಾನ ಶಿಬಿರ

ಕನಕಪುರ.ನ೯:ತಾಲೂಕಿನ ಸಾತನೂರು ಹೋಬಳಿಗೆ ಸೇರಿದ ಸೂರನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರತ್ನ ಪವರ್ ಸ್ಟಾರ್ ಪುನಿತ್‌ರಾಜ್ ಕುಮಾರ್‌ರವರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸೂರನಹಳ್ಳಿ ಶ್ರೀ ವಿನಾಯಕ ಗೆಳೆಯರ ಬಳಗದವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಭಿರದಲ್ಲಿ ಬೆಂಗಳೂರಿನ ರಕ್ತ ನಿಧಿ ಮಲ್ಲೇಶ್ವರಂ ಸಹಯೋಗದೊಂದಿಗೆ ಪುನಿತ್‌ರಾಜ್‌ಕುಮಾರ್ ಅಭಿಮಾನಿಗಳು ನಡೆಸಿಕೊಟ್ಟರು. ಸೂರನಹಳ್ಳಿ ಗ್ರಾಮಸೇರಿದಂತೆ ಸುತ್ತಮುತ್ತಲಿನ ಗ್ರಾಮ ೩೩ಜನ ಯುವರಕು ರಕ್ತದಾನವನ್ನು ಮಾಡಿದರು. ರಕ್ತದಾನ ಮಾಡಿದ ಎಲ್ಲಾ ಯುವಕರಿಗೆ ಹಣ್ಣು, ಮತ್ತು ತಂಪುಮಾನಿಯವನ್ನು ನೀಡಲಾಯಿತು.
ಕಂಸಾಗರದ ಸ್ವಾಮಿ, ಅರೆಕಟ್ಟೆದೊಡ್ಡಿಯ ಪ್ರಸಾದ್‌ಗೌಡ, ಮತ್ತು ಕುಮಾರ್ ಚಲುವರಾಮು, ಅನಿಲ್, ಸುನಿ, ನರೇಂದ್ರಸೇರಿದಂತೆ ಗ್ರಾಮದ ಅನೇಕ ಯುವಕರು ಪವರ್ ಸ್ಟಾರ್ ಪುನಿತ್‌ರಾಜ್ ಕುಮಾರ್‌ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸ್ಮರಣೆಯನ್ನು ಮಾಡಿದ ನಂತರ ಅನ್ನಸಂತರ್ಪಣೆಯನ್ನು ಮಾಡಿದರು.