ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದಿಂದ ಅನ್ನಸಂತರ್ಪಣೆ

ಚಾಮರಾಜನಗರ. ನ.08:- ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗ, ಈಶ್ವರಿ ಸಂಗೀತ ಶಾಲೆ ಹಾಗೂ ರಾಜರತ್ನ ಅಪ್ಪು ಯುವಸೇನಾ ಸಮಿತಿಯ ಸಹಯೋಗದೊಂದಿಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನುಡಿನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.
ನಗರದ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ನುಡಿನಮನ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭಾ ಅದ್ಯಕ್ಷೆ ಆಶಾನಟರಾಜು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳು ರಚಿಸಿದ ದೊಡ್ಡಮನೆ ಅರಸು ಎಂಬ ಗಾನಸುರುಳಿಯನ್ನು ಬಸವಟ್ಟಿ ಲೋಕೇಶ್ ಬಿಡುಗಡೆಗೊಳಿಸಿದ್ರು.
ಈ ವೇಳೆ ರಾಜರತ್ನ ಅಪ್ಪು ಯುವಸೇನಾ ಸಮಿತಿಯ ಅಧ್ಯಕ್ಷ ಕ್ಯಾಂಟೀನ್ ಮಂಜು, ಬಾಂಡ್ ರವಿ, ಮಂಜು ಮಿಲನ, ಕಾರ್ತಿಕ್ ಪವರ್, ರಂಗಪ್ಪು, ಮಣಿ ವಿಷ್ಣು ಹಾಗೂ ಬಂಗಾರು ಅವರುಗಳು ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.