ಪುನೀತ್ ರಾಜಕುಮಾರ ಪುಣ್ಯಸ್ಮರಣೆ


ಹುಬ್ಬಳ್ಳಿ,ಅ.31:ನಟ ಪುನೀತ್ ರಾಜಕುಮಾರ ಬಡವರು, ನಿರ್ಗತಿಕರು, ಶೋಷಿತರ ಪರ ಧ್ವನಿಯಾಗಿ ಅನೇಕ ಕೆಲಸ ಮಾಡಿದ್ದಾರೆ ಎಂದು ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಶಾಂತಣ್ಣ ಕಡಿವಾಳ ಹೇಳಿದರು.
ಕರ್ನಾಟಕ ಸೋಷಿಯಲ್ ಕ್ಲಬ್ ಹಾಗೂ ಚೇತನ ಫೌಂಡೇಷನ್ ಇವುಗಳ ಆಶ್ರಯದಲ್ಲಿ ಪುನೀತ ರಾಜಕುಮಾರ ಪ್ರಥಮ ಪುಣ್ಯಸ್ಮರಣೆ (ನೀನೇ ರಾಜಕುಮಾರ) ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ರಾಜರತ್ನ ಪ್ರಶಸ್ತಿ” ವಿತರಿಸಿ ಮಾತನಾಡಿದರು.
ಡಾ. ಪುನೀತ ರಾಜಕುಮಾರ ಅವರ ಅಗಲಿಕೆ ನಾಡಿಗೆ ನೊವುಂಟು ಮಾಡಿತು. ಅವರು ಮಾಡಿದ ಸಾಧನೆ ಎಂದೂ ಹೇಳಿಕೊಂಡವರಲ್ಲ. ಅವರು ಬಡಮಕ್ಕಳ ಆಶಾಜ್ಯೋತಿ ಎಂದು ಸಮಾಜ ಸೇವಕರು ಮತ್ತು ಶ್ರೇಯಾ ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷರಾದ ವಿ.ಜಿ. ಪಾಟೀಲ್ ಹೇಳಿದರು.
ರಾಜರತ್ನ ಪ್ರಶಸ್ತಿ ಪುರಸ್ಕøತರು (ಸಮಾಜ ಸೇವೆ ಸಾಧನೆಗೆ) ನಜೀರಅಹ್ಮದ ಕೋಲಕಾರ, ಡಾ.ಲಕ್ಷ್ಮೀದೇವಿ, ವಿ ಜಿ ಪಾಟೀಲ, ನಿಂಗಪ್ಪ ಸಿಂಗೋಟಿ, ಡಾ. ಸುಭಾಷ ಬಿ.ಎಂ. ಸುರೇಶ ಕೋರಕೊಪ್ಪ, ಮಂಜುಳಾ ರಾಮಡಗಿ, ಚಂದ್ರಶೇಖರ ಮಾಡಲಗಿ, ಮಂಜುಳಾ ಕಾಮದೇನು, ಶರಣು ಭಾರಕೇರ, ವಂದನಾ ಕರಾಳೆ, ವಿದ್ಯಾದೇವಗಿರಿ, ಜಿ.ವಿ.ಹಿರೇಮಠ, ರಾಮು ಮೂಲಗಿ, ದೀಪಕ ಕರ್ಜಗಿ, ರಾಮನಗೌಡ ವಿಲಾಸ ಅರಳಿಕಟ್ಟಿ, ಗುರುಸಿದ್ದಪ್ಪ ಬಡಿಗೇರ ಮತ್ತಿತರರು ಪಾಲ್ಗೊಂಡಿದ್ದರು.