ಪುನೀತ್ ರಾಜಕುಮಾರ ಅವರಿಗೆ ಮರಣೋತ್ತರವಾಗಿ ಸಿದ್ಧಶ್ರೀ ಪ್ರಶಸ್ತಿ

ಮುಗಳಖೋಡ-ಜಿಡಗಾ ಮಠ,ನ.13-ಈಚೆಗೆ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಮನೆಗೆ ಮುಗಳಖೋಡ-ಜಿಡಗಾ ಮಠದ ಪೂಜ್ಯ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಭೇಟಿ ನೀಡಿ, ಶ್ರೀಮಠದ ಶ್ರೀರಕ್ಷೆ ಸದಾಕಾಲ ನಿಮ್ಮೊಂದಿಗೆ ಇರುತ್ತದೆ ಎಂದು ಸಾಂತ್ವನದ ನುಡಿಗಳನ್ನು ಹೇಳಿ, ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿದರು.
ಪುನೀತ್ ರಾಜಕುಮಾರ್ ಅವರ ಕಾರ್ಯವೈಖರಿ ಅವಿಸ್ಮರಣೀಯ. ಕಳೆದ ಎರಡು ತಿಂಗಳಗಳ ಹಿಂದೆ ಚರ್ಚೆ ನಡೆಸಿ ಈ ವರ್ಷದ ಗುರುವಂದನಾ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ರಾಷ್ಟ್ರಿಯ “ಸಿದ್ಧಶ್ರೀ” ಪ್ರಶಸ್ತಿ ನೀಡಿ ಗೌರವೀಸಬೆಕೆಂದು ನಿರ್ಧರಿಸಲಾಗಿತ್ತು. ಆದರೆ ಅವರು ಅಕಾಲಿಕವಾಗಿ ಅಗಲಿ ಹೋದರು. ಆದರೂ ಅವರ ಸಮಾಜಪರ ಕಾರ್ಯ ಚಟುವಟಿಕೆಗಳನ್ನು ಹಾಗೂ ಅವರಲ್ಲಿರುವ ನಿಸ್ವಾರ್ಥ ಮನೋಭಾವನೆಯನ್ನು ಮನಗಂಡು ಈ ವರ್ಷದ ಡಿಸೆಂಬರ್ 2 ರಂದು ಶ್ರೀಕ್ಷೇತ್ರ ನವಕಲ್ಯಾಣ ಜಿಡಗಾ ಶ್ರೀಮಠದಲ್ಲಿ ನಡೆಯಲಿರುವ 37ನೇ ಗುರುವಂದನಾ ಸಮಾರಂಭದಲ್ಲಿ ಪುನೀತ್ ರಾಜಕುಮಾರವರಿಗೆ ಮರಣೋತ್ತರವಾಗಿ ರಾಷ್ಟ್ರೀಯ “ಸಿದ್ಧಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಗುವದೆಂದು ತಿಳಿಸಿದರು.