ಸಂಜೆವಾಣಿ ವಾರ್ತೆ
ಹಿರಿಯೂರು : ಜುಲೈ .29-ಜೀ ಕನ್ನಡ ಡ್ಯಾನ್ಸ್ ಕಾರ್ಯಕ್ರಮ ದ ಎರಡನೇ ಸೀಸನ್ ವಿಜೇತರಿಗೆ ನೀಡುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಟ್ರೋಫಿ ಹಿರಿಯೂರಿಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಪುನೀತ್ ರಾಜ್ ಅಭಿಮಾನಿಗಳು ಭವ್ಯವಾಗಿ ಸ್ವಾಗತಿಸಿದರು. ಇಲ್ಲಿನ ಬಿಇ ಓ ಕಚೇರಿ ಬಳಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಟ್ರೋಫಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು ನಂತರ ಪುನೀತ್ ರಾಜ್ ಕುಮಾರ್ ಅಭಿಮಾನಿ ಕಾಂತರಾಜ್ ರವರು ಮಾತನಾಡಿ ಡಾ. ರಾಜಕುಮಾರ್ ಅವರ ನಟನೆ ದೊಡ್ಮನೆ ಹಾಗೂ ಡಾ. ಪುನೀತ್ ರಾಜ್ ಕುಮಾರ್ ಅವರ ಸಮಾಜಮುಖಿ ಸೇವೆಯ ಬಗ್ಗೆ ತಿಳಿಸಿದರು. ಜೀ ಕನ್ನಡ ವತಿಯಿಂದ ಡ್ಯಾನ್ಸ್ ಕಾರ್ಯಕ್ರಮದ ವಿಜೇತರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಟ್ರೋಫಿ ನೀಡುತ್ತಿರುವುದನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಅರುಣ್, ರವಿ, ಕಾಂತರಾಜ್, ಗೋವರ್ಧನ್, ಬಸವರಾಜ್, ಶಿವು, ಅಜಯ್, ಮುತ್ತು, ಬೆಳ್ಳಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.