ಪುನೀತ್ ರಾಜಕುಮಾರ್ ಜನ್ಮದಿನೋತ್ಸವ ಆಚರಿಸಿದ ಶಾಮನೂರ್ ಸಮರ್ಥ್

ದಾವಣಗೆರೆ. ಮಾ.೧೮; ಕನ್ನಡ ಚಿತ್ರರಂಗದ ಮೇರು‌ ಪ್ರತಿಭೆ, ಅಭಿಮಾನಿಗಳ ಪ್ರೀತಿಯ ‘ಅಪ್ಪು’ ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನವನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ 01ನೇ ವಾರ್ಡಿನಲ್ಲಿ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗಿತ್ತು, ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಉದ್ಯಮಿಗಳಾದ  ಶಾಮನೂರ್ ಸಮರ್ಥ್  ಪಾಲ್ಗೊಂಡು ಡಾ.ಪುನೀತ್ ರಾಜಕುಮಾರ್  ಭಾವಚಿತ್ರಕ್ಕೆಪೂಜೆ ಸಲ್ಲಿಸಿ, ಜನ್ಮದಿನೋತ್ಸವದ ಪ್ರಯುಕ್ತವಾಗಿ ಕೇಕ್ ಕತ್ತರಿಸುವುದರ ಮುಖಾಂತರವಾಗಿಚಿಕ್ಕ ಮಕ್ಕಳಿಗೆ ಸಿಹಿ ತಿನಿಸಿದರು, ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ಪ್ರಯುಕ್ತವಾಗಿ ಸಾರ್ವಜನಿಕರಿಗೆ ಭಾವಚಿತ್ರವನ್ನು  ನೀಡಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸಮಾಜ ಸೇವೆಯನ್ನ ಸ್ಮರಿಸಿದರು.