ಪುನೀತ್ ರಾಜಕುಮಾರರ ಆದರ್ಶ ನಮಗೆಲ್ಲಾ ಮಾರ್ಗದರ್ಶನ – ಸಚಿನ್ ಕುಮಾರ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 30 :- ಪುನೀತ್ ರಾಜ್ ಕುಮಾರವರ ಸಮಾಜಸೇವೆಯಂತಹ  ಅನೇಕ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದು ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯ ಕೆ ಎಚ್ ಎಂ ಸಚಿನಕುಮಾರ ಅಭಿಪ್ರಾಯವ್ಯಕ್ತಪಡಿಸಿದರು.    
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ  ಅನೇಕ ಸೇವಾಕಾರ್ಯದಲ್ಲಿ ತೊಡಗಿಕೊಂಡು ದಾನರೂಪದಲ್ಲಿ ಕೊಟ್ಟ  ಹಣವನ್ನು ಎಲ್ಲಿಯೂ  ಪ್ರಚುರ ಪಡಿಸದೆ ತೆರೆಮರೆಯಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಂಡು ಇತ್ತೀಚಿಗೆ ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದ ಸ್ಯಾಂಡಲ್ ವುಡ್ ನ ಮೇರುನಟ ಹಾಗೂ ಯುವರತ್ನ ಪುನೀತ್  ಸ್ಮರಣಾರ್ಥ ಕೂಡ್ಲಿಗಿಯಲ್ಲಿ ಎಸ್.ಎಸ್.ನಾರಾಯಣ ಹಾಟ್೯ ಕೇರ್ ಸೆಂಟರ್ ದಾವಣಗೆರೆ,  ತಾಲ್ಲೂಕು ಸಾವ೯ಜನಿಕ ಆಸ್ಪತ್ರೆ ಕೂಡ್ಲಿಗಿ,  ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗ ಕೂಡ್ಲಿಗಿ,  ಆರೋಹಣ ಸೊಸೈಟಿ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆ ಕೂಡ್ಲಿಗಿ ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೂಡ್ಲಿಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ  ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತ ಪ್ರತಿಯೊಬ್ಬರೂ ಪುನೀತ್ ರವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅವರಂತೆ ಯಾವುದೇ ಪ್ರಚಾರವಿಲ್ಲದ ಸೇವಾಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಸಚಿನ್ ತಿಳಿಸಿದರು.                                                                                                                          ತಾಲೂಕು ಸಾವ೯ಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿನಯ್  ಮಾತನಾಡಿ ಪುನಿತ್ ರಾಜ್ ಕುಮಾರ್ ಅವರ ಸಾಧನೆ ಎಷ್ಟು ಹೊಗಳಿದರು  ಸಾಲದು ಅವರಂತೆ ನಾವುಗಳೆಲ್ಲರು ಸಮಾಜಕ್ಕೆ ಸೇವೆಯಲ್ಲಿ  ನಿರಂತರವಾಗಿ ತೊಡಗಿಕೊಳ್ಳಬೇಕು ಹಾಗೆಯೇ  ಈ ರೀತಿಯ  ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಶಿಬಿರಗಳ ಕಾರ್ಯಕ್ರಮಗಳನ್ನು ಸಾವ೯ಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.                ಈ ಕಾಯ೯ಕ್ರಮದಲ್ಲಿ  ತಾಲೂಕು ಸಾವ೯ಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಮನ್ಸುರ್ ಆಲಿ ಕೀವಿ ಮೂಗು ಗಂಟಲು ತಜ್ಞರು, ಡಾ. ಶ್ರವಣ್ ರೆಡ್ಡಿ ಫೀಷಿಸಿಯನ್.  ಡಾ. ಗುರುನಾಥ್ ಹೆಚ್.ಎಸ್ ಶಸ್ತ್ರ ಚಿಕಿತ್ಸಕರು .   ಆಡಳಿತ ಸಹಾಯಕ ಅಧಿಕಾರಿ ವೀರಣ್ಣ,    ವೀರಭದ್ರಪ್ಪ ಕೆ.ಬಿ.ಎಮ್ ಕಛೇರಿ ಅಧೀಕ್ಷಕ, ನಾಗರತ್ನ, ಕೂಡ್ಲಿಗಿ  ಪಟ್ಟಣ ಪಂಚಾಯಿತಿ ಸದಸ್ಯ ಪಿ. ಚಂದ್ರು,  ಸುರೇಶ್ ವಾಲ್ಮೀಕಿ ಮಹಾಸಭಾದ  ತಾಲೂಕ ಅಧ್ಯಕ್ಷ ಸುರೇಶ,  ಲಕ್ಷ್ಮಿದೇವಿ ಬಸವರಾಜ ಪಟ್ಟಣ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಬಸವರಾಜ,  ದಾವಣಗೆರೆಯ ಕಿರಿಯ ಕಾಡಿ೯ಯಲಾಜಿಷ್ಟ್  ಡಾ. ಗುರುರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 ಕುಮಾರಿ ಸುಪ್ರೀತಾ ಪ್ರಾರ್ಥಿಸಿದರು, ಸ್ವಾಗತ  ನಾಗರತ್ನ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ನಾಗರತ್ನ ಸ್ವಾಗತಿಸಿದರು  ನಿರೂಪಣೆ ಕೆ. ಪ್ರಶಾಂತ ಕುಮಾರ ನಿರೂಪಿಸಿದರು. ತಾಲೂಕು ಸಾವ೯ಜನಿಕ ಆಸ್ಪತ್ರೆ ಸಿಬ್ಬಂದಿಗಳಾದ ರಾಘವೇಂದ್ರ ರಾಮಂಜಿನೆಯ್ಯ ಹೆಚ್  ರಾಮಂಜಿನೆಯ್ಯ  ಸತೀಶ್ ಕುಮಾರ್ ಗಂಗಮ್ಮ ವಿನಾಯಕ ಆರೋಹಣ ಸೊಸೈಟಿ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆ  ಸಿಬ್ಬಂದಿ ರವಿಕುಮಾರ  ಪತ್ರಿಗೌಡ,  ಭಗತ್ ಸಿಂಗ್ ಯುವ ವೇದಿಕೆ ಸದಸ್ಯರಾದ ವಿನಾಯಕ, ಸಿದ್ಧಾರ್ಥ, ವಿರೇಶ,  ವೃಷಬೇಂದ್ರ,  ಚಂದ್ರಶೇಖರ ಇತರರು ಮತ್ತು ಎಸ್ ಎಸ್ ನಾರಾಯಣ  ಹಾರ್ಟ್ ಕೇರ್ ಸೆಂಟರ್