ಪುನೀತ್ ಪುತ್ಥಳಿ ಬಿಬಿಎಂಪಿ ಸ್ಥಾಪನೆ

ಬೆಂಗಳೂರು, ನ.೬- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಗಲಿಕೆ ಹಿನ್ನೆಲೆ ಅಭಿಮಾನಿಗಳು ಅನಧಿಕೃತವಾಗಿ ಪುನೀತ್ ಪುತ್ಥಳಿ ಸ್ಥಾಪಿಸದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಆದೇಶ ಹಿನ್ನೆಲೆ ಅನಧಿಕೃತ ಯಾವುದೇ ಪುತ್ಥಳಿ ಸ್ಥಾಪನೆ ಮಾಡಬಾರದು. ಇನ್ನೂ, ಪುನೀತ್ ರಾಜ್ ಕುಮಾರ್ ಅವರ ಆಗಲಿಕೆ ಹಿನ್ನೆಲೆ ಸರ್ಕಾರದ ತೀರ್ಮಾನದಂತೆ ಅಧಿಕೃತವಾಗಿ ಒಂದು ಪುತ್ಥಳಿ ಸ್ಥಾಪನೆ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಅನಧಿಕೃತ ಪುತ್ಥಳಿ ತೆರವಿಗೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ , ಅನುಮತಿ ಪಡೆಯದೆ ಯಾವುದೇ ಪುತ್ಥಳಿ ಸ್ಥಾಪಿಸುವಂತಿಲ್ಲ. ಹೀಗಾಗಿ ಬಿಬಿಎಂಪಿ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಇಡದಂತೆ ಸೂಚನೆ ನೀಡಲಾಗಿದ್ದು, ಪಾದಚಾರಿ ಮಾರ್ಗ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತಹ ಸ್ಥಳ ಗುರುತಿಸಲು ಸೂಚನೆ ನೀಡಲಾಗಿದೆ ಎಂದರು.