ಪುನೀತ್ ಪುಣ್ಯ ಸ್ಮರಣೆ-ಅನ್ನದಾಸೋಹ

ಆನೇಕಲ್.ನ.೯:ನಟ ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ಅಂಗವಾಗಿ ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಜಿಗಣಿ ಪುನೀತ್‌ನೇತೃತ್ವದಲ್ಲಿ ಚಂದಾಪುರ ಸಮೀಪದಲ್ಲಿರುವ ಸಿಪಾನಿ ವೃದ್ದಾಶ್ರಮದಲ್ಲಿ ಒಂದು ದಿನದ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ಸಂಧರ್ಭದಲ್ಲಿ ಕರವೇ ಕಾರ್ಯಕರ್ತರು ನಟ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡಿ ಮತ್ತು ಮೇಣದ ದೀಪ ಹಚ್ಚಿ ಪುನೀತ್ ರವರಿಗೆ ನುಡಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕರವೇ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಹೆಬ್ಬಗೋಡಿ ಅಂಬರೀಶ್, ಕರವೇ ಮುಖಂಡರಾದ ಕಬ್ಬಡ್ಡಿ ಮಂಜು, ಹುಸೇನ್, ಕನ್ನಡದ ಮರಿ, ಹುಸೇನ್ ಮತ್ತು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.