ಪುನೀತ್ ಪುಣ್ಯಸ್ಮರಣೆ: ಅನ್ನಸಂತರ್ಪಣೆ

ಕಲಬುರಗಿ,ಅ.29: ಕನ್ನಡ ಚಿತ್ರ ರಂಗದ ಮಿನುಗು ತಾರೆ, ಸೂಪರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ ಪ್ರಯುಕ್ತ ನಗರದಲ್ಲಿ ಕನಾಟಕ ಸಮತಾ ಸೈನಿಕ ದಳದ ವತಿಯಿಂದ ಪುಣ್ಯಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಭಾಗೀಯ ಅಧ್ಯಕ್ಷ ಸಂಜೀವ್ ಟಿ. ಮಾಲೆ, ಜಿಲ್ಲಾಧ್ಯಕ್ಷ ಈರಣ್ಣ ಜಾನೆ, ಶಿವಲಿಂಗಮ್ಮ ಸಾವಳಗಿ, ನಂದಕುಮಾರ್ ತಳಕೇರಿ, ಸತೀಶ್ ಮದ್ರಿ, ಮಹಾದೇವಿ, ಇಂದುಮತಿ ಭರತನೂರ್, ಮಿಲಿಂದ್ ಕಣಮುಸ್ ಮುಂತಾದವರು ಉಪಸ್ಥಿತರಿದ್ದರು.
ಅನ್ನಸಂತರ್ಪಣೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ ನಿಮಿತ್ಯ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಅನ್ನಸಂತರ್ಪಣೆ ನೆರವೇರಿತು. ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಮೇಯರ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಶರಣು ಮೋದಿ, ರಾಜು ವಾಡಕೇರ್, ರವಿ ದೇಗಾಂವ್ ಮುಂತಾದವರು ಪಾಲ್ಗೊಂಡಿದ್ದರು.