ಪುನೀತ್ ಪುಣ್ಯತಿಥಿ ಅಂಗವಾಗಿ ರಕ್ತದಾನ ಶಿಬಿರ

Shivaraj kumar donated the blood at place ground 

ಬೆಂಗಳೂರು, ನ.೯- ನಟ ಪುನೀತ್ ರಾಜಕುಮಾರ್ ಅವರ ಪುಣ್ಯತಿಥಿಯ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ನಟ ಶಿವರಾಜ್ ಕುಮಾರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುತ್ತಿದ್ದಂತೆ ಅಭಿಮಾನಿಗಳು ಹಾಗೂ ಪೊಲೀಸರು ಕೂಡ ರಕ್ತದಾನ ಮಾಡಿ ಪುನೀತ್ ರಾಜಕುಮಾರ್ ಅವರ ಸೇವಾಕಾರ್ಯಗಳಲ್ಲಿ ತಾವು ಬಾಗಿ ಅನ್ನುವುದನ್ನು ತೋರಿಸಿಕೊಟ್ಟರು.

ನಗರದ ಅರಮನೆ ಮೈದಾನಕ್ಕೆ ಬೆಳಗ್ಗೆಯಿಂದಲೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.

ಚಿಕ್ಕ ಮಕ್ಕಳಂತೂ ಪುನೀತ್ ರಾಜಕುಮಾರ್ ಅವರನ್ನು ನೆನೆದು ಅವರ ಚಿತ್ರದ ಹಾಡುಗಳನ್ನು ನೆನಪು ಮಾಡಿಕೊಂಡರು.

ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ಜನರು ಪುನೀತ್ ರಾಜಕುಮಾರ್ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಗಲಿದ ನಟನ ಗುಣಗಾನ ಮಾಡಿದರು