ಪುನೀತ್ ಪತ್ನಿ ಅಶ್ವಿನಿಗೆ ತೆಲುಗು ನಟ ನಾಗಾರ್ಜುನ ಸಾಂತ್ವನ

ಬೆಂಗಳೂರು, ನ.2- ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಆಗಮಿಸಿದ ತೆಲುಗು ನಟ ನಾಗಾರ್ಜುನ, ಪತ್ನಿ ಅಶ್ವಿನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದರು.

ಹಿರಿಯ ಕಲಾವಿದ ಹಾಗು ಸಹೋದರ ಶಿವರಾಜ್ ಕುಮಾರ್ ಅವರೊಂದಿಗೆ ಆಗಮಿಸಿ ಪತ್ನಿ ಮಕ್ಕಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ನಾಗಚೈತನ್ಯ ಅವರು ಪುನೀತ್ ರಾಜಕುಮಾರ್ ನನ್ನೊಂದಿಗೆ ಇಲ್ಲ ಎನ್ನುವುದನ್ನು ನಂಬಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪುನೀತ್ ಅಗಲಿಕೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.ಅವರ ಸಾವು ತುಂಬಾ ನೋವು ತರಿಸಿದೆ ಎಂದು ಕಂಬನಿ ಮಿಡಿದರು.

ಚಿತ್ರೀಕರಣ ಸಮಯದಲ್ಲಿ ಪುನೀತ್ ಅವರು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು. ಬಹುಬೇಗ ಆಗಲಿರುವುದು ನೋವು ತರಿಸಿದೆ ಎಂದು ಅವರು ಹೇಳಿದ್ದಾರೆ.

ಪತ್ನಿ ಮತ್ತು ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ಪುನೀತ್ ಅಗಲಿಕೆಯನ್ನು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಹೇಳಿದರು