ಪುನೀತ್ ನಿವಾಸಕ್ಕೆ ಮುರುಘಾಶ್ರೀ ಭೇಟಿ

ಚಿತ್ರದುರ್ಗ, ನ. 11; ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು  ಪುನೀತ್‌ರಾಜ್‌ಕುಮಾರ್  ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಶ್ರೀಮಠದಿಂದ ಪುನೀತ್‌ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರಕಟಿಸಲಾಗಿರುವ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವಂತೆ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಮತ್ತು ಕುಟುಂಬ ವರ್ಗದವರಿಗೆ ಅಧಿಕೃತ ಆಹ್ವಾನ ನೀಡಿದರು. ಶ್ರೀಮಠದ ಆಹ್ವಾನಕ್ಕೆ ಕುಟುಂಬ ವರ್ಗವು ಸಹಮತ ವ್ಯಕ್ತಪಡಿಸಿ, 2022ನೇ ಮೇ ತಿಂಗಳಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನಿರ್ಮಾಪಕ ಚಿನ್ನೇಗೌಡ, ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ, ಪಟೇಲ್ ಶಿವಕುಮಾರ್, ಡಿ.ಎಸ್. ಮಲ್ಲಿಕಾರ್ಜುನ್, ಸಿದ್ಧವ್ವನಹಳ್ಳಿ ಪರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜ್, ವಕೀಲರಾದ ಉಮೇಶ್ ಮೊದಲಾದವರಿದ್ದರು.