ಪುನೀತ್ ಅವರಂತೆ ಬಾಳಬೇಕು- ರಮೇಶ ದರ್ಶನಕರ್

ಪುನೀತ್ ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಸಿರವಾರ.ನ.೯- ಮಾನವ ಜೀವನ ಕ್ಷಣಿಕವಾಗಿದ್ದೂ, ಜೀವನದಲ್ಲಿ ಮಾನವರು ಹೇಗೆ ಜೀವನ ನಡೆಸಬೇಕು, ನಾವು ಹೋದ ನಂತರವು ನಮ್ಮನೂ ಜನರು ನೆನೆಯ ಬೇಕು ಎಂದರೆ ಪುನೀತ್ ರಾಜಕುಮಾರರಂತೆ ಜೀವನ ನಡೆಸಬೇಕು ಎಂದು ಕಾಂಗ್ರೇಸ್ ಯುವ ಮುಖಂಡ ರಮೇಶ ದರ್ಶನಕರ್ ಹೇಳಿದರು.
ಚಿತ್ರ ನಟ ಪುನೀತ್ ರಾಜಕುಮಾರ ನಿಧನವಾಗಿ ೧೧ ನೇ ದಿನದ ಅಂಗವಾಗಿ ಪಟ್ಟಣದ ಊರಭಾವಿಯ ಹತ್ತಿರ ಪುನೀತ್ ರಾಜಕುಮಾರ ಅಭಿಮಾನಿ ಬಳಗದಿಂದ ಅನ್ನ ಸಂರ್ತಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ಅಲ್ಪ ಸಮಾಜ ಸೇವೆ ಮಾಡಿ ಪ್ರಚಾರ ತೆಗೆದುಕೊಳ್ಳುತೆವೆ. ಅನಾಥಶ್ರಮ, ಮಹಿಳಾ ಸಂಘ, ಶಿಕ್ಷಣ ಸೇರಿ ನೂರಾರು ಉತ್ತಮ ಕೆಲಸಗಳನ್ನು ಮಾಡಿ ಒಂದೇ ಒಂದು ದಿನ ಪ್ರಚಾರ ಬಯಸದೆ. ಹಾಗೂ ಕೇಲವು ನಟರು ಗುಟ್ಕಾ, ಸಿಗರೇಟ್, ಇನ್ನಿತರ ಕೆಟ್ಟ ಹವ್ಯಾಸಗಳಿಗೆ ರಾಯಭಾರಿಯಾಗಿದ್ದಾರೆ. ಆದರೆ ರೈತರಿಗೆ ಉಪಯೋಗವಾಗುವ ಹಾಲು, ಹಾಲಿನ ಉತ್ಪನ್ನ, ವಿದ್ಯುತ್ ಉಳಿಸಲು ಎಲ್.ಇ.ಡಿ ಬಲ್ಬ್ ಬಳಕೆಗೆ ಉಚಿತವಾಗಿ ರಾಯಬಾರಿಯಾಗಿ ಪ್ರಚಾರ ಮಾಡುವ ಮೂಲಕ ತಂದೆಯಂತೆ ನಡೆದಿದ್ದಾರೆ. ಇಂದಿನ ಯುವಕರು ಅವರ ಆದರ್ಶನಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು. ಅಭಿಮಾನಿಗಳು ಸಹ ಹಸಿದವರಿಗೆ ಅನ್ನ ನೀಢುವ ಮೂಲಕ ಅವರ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅವರು ತಿಳಿಸಿದಂತೆ ದುಷ್ಚಟಗಳಿಂದ ದೂರ ಇರಬೇಕು ಎಂದರು.
ಸಂಜೀವಿನಿ ಟ್ರಸ್ಟ್ ಅದ್ಯಕ್ಷ ಜ್ಞಾನಮಿತ್ರ ಮಾತನಾಡಿ ಪುನೀತ್ ರಾಜಕುಮಾರ ಯಾವುದೇ ದುಶ್ಚಟಗಳನ್ನು ಮಾಡದೆ ಸದೃಡ ಕಾಯವನ್ನು ಹೊಂದಿದ್ದರು. ಅವರು ನಿಧನ ನಂತರ ಅವರ ಕಣ್ಣುಗಳಿಂದ ಆದುನಿಕ ಶಸ್ತ್ರ ಚಿಕಿತ್ಸೆಯಿಂದ ಇಂದು ೪ ಜನರಿಗೆ ದೃಷ್ಠಿ ಬರಿಸಲಾಗಿದೆ. ಇನ್ನೂ ಹೆಚ್ಚಿನ ಜನರಿಗೆ ದೃಷ್ಠಿ ಬರುತ್ತದೆ ಎಂದು ಹೇಳಲಾಗಿದೆ. ಇಂತಹ ಮಹಾನ ಸಕಲಕಲಾವಲ್ಲಬರನ್ನು ಕರೆದುಕೊಂಡ ನಾಡು ಬಡವಾಗಿದೆ ಎಂದರು.
ಪ.ಪಂ ಮಾಜಿ ಉಪಾದ್ಯಕ್ಷ ಚನ್ನಬಸವಗಡ್ಲ, ಗಾಯಕ ಹಾಗೂ ನಮ್ಮ ಕರವೆ ಅಧ್ಯಕ್ಷ ಶಂಕರಗೌಡ, ಹಾಜಿಮಲ್ಲಂಗ್, ಮಲ್ಲಿಕಾರ್ಜುನ,ಹೆಚ್.ಕೆ.ರಾಘು,ದುರುಗಪ್ಪ ಭೋವಿ, ದಾವೂದ್, ಚಂದ್ರಮೌಳಿ,ಸಂಚಾರಿ ತಿರುಪತಿ, ರಾಜ, ಹನುಮೇಶ,ದೇವರಾಜ, ಹುಲಿಗೆಪ್ಪ, ನಭಿ, ಮುದಿಯಪ್ಪ,ಬಸವರಾಜ,ವಿಶ್ವದೇವ,ಮಂಜುನಾತ,ಹುಲಿಗೆಪ್ಪ ಸೇರಿದಂತೆ ನೀಲಮ್ಮ ಕಾಲೋನಿ ಅಭಿಮಾನಿ ಬಂಧುಗಳು ಇದ್ದರು