ಪುನೀತ್ ಅಭಿಮಾನಿಗಳಿಂದ ಅನ್ನದಾಸೋಹ

(ಸಂಜೆವಾಣಿ ವಾರ್ತೆ)
ಕಮಲಾಪುರ, ನ.02:  ನಟ ಪುನೀತ್ ರಾಜಕುಮಾರ್ ಅವರ ಹಾಲುತುಪ್ಪ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇಲ್ಲಿನ  ಅಂಬೇಡ್ಕರ್ ನಗರದ ಯುವಕರು, ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್‌ ನಿಂದ  ನಿನ್ನೆ  ಹಾಲು ತುಪ್ಪ  ಮತ್ತು ಅನ್ನದಾಸೋಹ  ಕಾರ್ಯಕ್ರಮವನ್ನು ನೆರವೇರಿಸಿದರು.
ಅಪ್ಪು ಅವರ ಭಾವಚಿತ್ರ ಹಾಗೂ ಫ್ಲೆಕ್ಸ್ ಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪು ನಮ್ಮಲ್ಲಿ ಎಂದಿಗೂ ಜೀವಂತವಿರುತ್ತಾರೆ ಎಂದು ಅಭಿಮಾನಿಗಳು ಭಾವುಕರಾದರು,
ಅನ್ನ ಪ್ರಸಾದ ಸ್ವೀಕರಿಸಿದ ನೂರಾರು ಜನ ಪುನೀತ್ ರಾಜ್ ಕುಮಾರ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
 ಅಂಬೇಡ್ಕರ್ ನಗರದ ಅಭಿಮಾನಿಗಳು ಪ್ರತಿವರ್ಷವೂ ಕೂಡ ಇದೇರೀತಿ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆಂದರು.
ಪುನೀತ್ ರಾಜಕುಮಾರ್ ರವರ ಸರ್ಕಲ್ ಹಾಗೂ ಉದ್ಯಾನವನ ನಿರ್ಮಿಸುವ ಬಗ್ಗೆ ಈಗಾಗಲೇ ಸಚಿವರು  ಹೇಳಿಕೆ ನೀಡಿದ್ದು ಅವರು ಆದಷ್ಟು ಬೇಗ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದರು.
ಯುವಕರು, ಮುಖಂಡರು ಹಾಗೂ ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ ನ ಸದಸ್ಯರುಗಳು ಇದ್ದರು.